Ashwaveega News 24×7 ಮಾರ್ಚ್ 19 – 2026 : ‘ಕೆಡಿ’ ಸಿನಿಮಾದ “ಸರ್ಸೆ ನಿನ್ನ ಸೆರಗ ಸರ್ಸೆ” ಹಾಡು ಸುತ್ತಲಿನ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಈ ನಡುವೆ ನಿರ್ದೇಶಕ ಪ್ರೇಮ್ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದು, ಕ್ಷಮೆಯಾಚನೆ ಜೊತೆಗೆ ಸ್ಪಷ್ಟನೆ ನೀಡಿದ್ದಾರೆ.
“ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ,” ಎಂದು ಪ್ರೇಮ್ ಹೇಳಿದ್ದಾರೆ. ಹಾಡಿನ ಸಾಹಿತ್ಯದ ಬಗ್ಗೆ ಎದ್ದಿರುವ ಆಕ್ಷೇಪಣೆಗಳ ಹಿನ್ನೆಲೆ, “ಹಾಡಿನ ಸಾಹಿತ್ಯವನ್ನು ಬದಲಾಯಿಸುತ್ತೇನೆ. ಹೊಸ ಸಾಲುಗಳನ್ನು ಬರೆಯಿಸಿ ಮತ್ತೆ ಹಾಡನ್ನು ಬಿಡುಗಡೆ ಮಾಡುತ್ತೇವೆ,” ಎಂದು ತಿಳಿಸಿದ್ದಾರೆ.
ಆದರೆ ಇದೇ ವೇಳೆ ಅವರು ನಟಿ ನೋರಾ ಫತೇಹಿ ವಿರುದ್ಧ ಆಕ್ರೋಶವೂ ವ್ಯಕ್ತಪಡಿಸಿದ್ದಾರೆ. “ವಿವಾದದಿಂದ ತಪ್ಪಿಸಿಕೊಳ್ಳಲು ಈ ರೀತಿಯ ಹೇಳಿಕೆಗಳನ್ನು ನೀಡಲಾಗುತ್ತಿದೆ,” ಎಂದು ಅವರು ಆರೋಪಿಸಿದ್ದಾರೆ.
“ಹಾಡಿನ ಸಾಹಿತ್ಯದ ಬಗ್ಗೆ ನೋರಾ ಫತೇಹಿಗೆ ಮೊದಲೇ ತಿಳಿಸಲಾಗಿತ್ತು. ಹಾಡನ್ನು ಕೇಳಿದ ನಂತರವೇ ಅವರು ಒಪ್ಪಿಗೆ ಸೂಚಿಸಿದ್ದರು,” ಎಂದು ಪ್ರೇಮ್ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.
ಒಂದೆಡೆ ಕ್ಷಮೆಯಾಚನೆ, ಮತ್ತೊಂದೆಡೆ ಆರೋಪ – ಪ್ರತ್ಯಾರೋಪಗಳಿಂದ ‘ಕೆಡಿ’ ಸಿನಿಮಾ ವಿವಾದ ಹೊಸ ತಿರುವು ಪಡೆದಿದೆ . ಹಾಡಿನ ಹೊಸ ಆವೃತ್ತಿ ಯಾವಾಗ ಬರುತ್ತದೆ ಮತ್ತು ಈ ವಿವಾದ ಹೇಗೆ ಅಂತ್ಯಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.
