ಹಾಸನ : ಇತಿಹಾಸ ಪ್ರಸಿದ್ಧ ಹಾಸನಾಂಬ ದರ್ಶನೋತ್ಸವವು ಅಕ್ಟೋಬರ್ 24 ರಿಂದ ಪ್ರಾರಂಭಗೊಂಡಿದ್ದು, ಹಾಸನಾಂಬ ದೇವಿ ದರ್ಶನಕ್ಕೆ ಬೇರೆ ಬೇರೆ ಭಾಗಗಳಿಂದ ಭಕ್ತರು ಬಾರದಂತೆ ಜಿಲ್ಲಾಡಳಿತ ಮನವಿ ಮಾಡಿತ್ತು. ಕಳೆದ 10 ದಿನಗಳಿಂದ ನಡೆಯುತ್ತಿದ್ದ ಹಾಸನಾಂಬೆ ಉತ್ಸವಕ್ಕೆ ಇಂದು ಮಧ್ಯಾಹ್ನ 12:33ಕ್ಕೆ ಶಾಸ್ತ್ರೋಕ್ತವಾಗಿ ತೆರೆ ಬಿದ್ದಿದ್ದು, ಈ ಮೂಲಕ 11 ದಿನಗಳ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ತೆರೆ ಹೇಳೆಯಾಲಾಗಿದೆ
ದೇವಾಲಯದ ಗರ್ಭಗುಡಿಯನ್ನು ಶಾಸಕ ಹೆಚ್.ಪಿ ಸ್ವರೂಪ್ಪ್ರಕಾಶ್, ಕೆ.ಎಂ.ಶಿವಲಿಂಗೇಗೌಡ, ಸಿಮೆಂಟ್ ಮಂಜು, ಸಂಸದ ಶ್ರೇಯಸ್ಪಟೇಲ್, ಡಿಸಿ ಸಿ.ಸತ್ಯಭಾಮ, ಎಸ್ಪಿ ಮಹಮದ್ ಸುಜೇತಾ ಹಾಗೂ ದೇವಾಲಯದ ಆಡಳಿತಾಧಿಕಾರಿ ಮಾರುತಿಯವರ ಸಮಾಕ್ಷಮದಲ್ಲಿ ಮುಚ್ಚಲಾಯಿಗಿದ್ದು, ಪ್ರತಿ ವರ್ಷದಂತೆ ವಿಶ್ವ ರೂಪ ದರ್ಶನದ ಬಳಿಕ ನೆರೆದಿದ್ದ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇದಕ್ಕೂ ಮುನ್ನ ಬೆಳಿಗ್ಗೆ ಸಾರ್ವಜನಿಕ ದರ್ಶನ ಬೇಗ ಬಂದ್ ಮಾಡಿದ್ದರಿಂದ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮುಂದಿನ ವರ್ಷ 2025 ಅ.9 ರಿಂದ ಅ.23 ರವರೆಗೆ ಹಾಸನಾಂಬೆ ದರ್ಶನೋತ್ಸವ ನಿಗದಿಯಾಗಿದೆ.