
ಚಾಂಪಿಯನ್ಸ್ ಟ್ರೋಫಿಯಲ್ಲಿ ಹೀನಾಯ ಪ್ರದರ್ಶನ ನೀಡಿ ಲೀಗ್ ಹಂತದಲ್ಲೇ ಹೊರ ಬಿದ್ದಿರುವ ಪಾಕಿಸ್ತಾನ ತಂಡದಲ್ಲಿ ಮೇಜರ್ ಸರ್ಜರಿ ಆಗುವ ಸಾಧ್ಯತೆಯಿದೆ. ಟೂರ್ನಿಯಲ್ಲಿ ಆಡಿದ 3 ಪಂದ್ಯಗಳಿಂದ ಒಂದು ಪಂದ್ಯ ಗೆಲ್ಲದೇ ಪಾಕಿಸ್ತಾನ ತಂಡ ತನ್ನ ಅಭಿಯಾನವನ್ನು ಮುಗಿಸಿತ್ತು.. ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಸಾಕಷ್ಟು ಮುಜುಗರ ಉಂಟು ಮಾಡಿದೆ. ಇದಕ್ಕೆ ಪ್ರಮುಖ ಕಾರಣ ಈ ಬಾರಿ ಚಾಂಪಿಯನ್ಸ್ ಟ್ರೋಫಿ ಅತಿಥ್ಯಕ್ಕೆ ಪಾಕ್ ಕ್ರಿಕೆಟ್ ಮಂಡಳಿ ನಡೆಸಿದ್ದ ಕಸರತ್ತು. ಸಾಕಷ್ಟು ವಿರೋಧಗಳ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟೂರ್ನಿ ಅತಿಥ್ಯವನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನದಿಂದ ಪಾಕ್ನ ಆಟಗಾರರು ಕ್ರಿಕೆಟ್ ಮಂಡಳಿಯ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ಮುಂಬರುವ ನ್ಯೂಜಿಲೆಂಡ್ ಸರಣಿಗೆ ಪಾಕ್ ತಂಡದಲ್ಲಿ ಭಾರೀ ಬದಲಾವಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಬಾಬರ್ ಆಝಂ, ಶಾಹೀನ್ ಶಾ ಆಫ್ರಿದಿ, ನಸೀಮ್ ಶಾ ಅವರನ್ನು ತಂಡದಿಂದ ಕೈ ಬಿಡಲು ಆಯ್ಕೆದಾರರು ಮುಂದಾಗಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

ಅಭಿಷೇಕ್.ಎಸ್