Ashwaveega News 24×7 ಮಾರ್ಚ್ 30 – 2026 : ಮುಂಬೈ: ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಸಾಧಿಸಿ ಸಾವಿರ ಕೋಟಿ ರೂಪಾಯಿಗೂ ಅಧಿಕ ವಸೂಲಿ ಮಾಡಿರುವ ನಡುವೆಯೇ, ಪಾಕಿಸ್ತಾನದಿಂದ ವಿಚಿತ್ರ ಬೇಡಿಕೆಯೊಂದು ಕೇಳಿಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಾಯಿದೆ .
ಪಾಕಿಸ್ತಾನದಲ್ಲಿ ಅಧಿಕೃತವಾಗಿ ಬಿಡುಗಡೆ ಆಗದಿದ್ದರೂ, ಈ ಸಿನಿಮಾ ಅಲ್ಲಿ ಕೂಡ ಜನಪ್ರಿಯತೆ ಪಡೆದಿದೆ . ವಿಶೇಷವಾಗಿ ಸಿನಿಮಾದ ಕಥಾ ವಸ್ತುವಿನಲ್ಲಿ ಕಾಣಿಸಿಕೊಳ್ಳುವ ಕರಾಚಿಯ ಲಿಯಾರಿ ಪ್ರದೇಶದ ಹಿನ್ನೆಲೆ ಚರ್ಚೆಗೆ ಕಾರಣವಾಗಿದೆ .
ಈ ಹಿನ್ನೆಲೆ , ಲಿಯಾರಿ ಪ್ರದೇಶದ ಕೆಲವು ಮಂದಿ ‘ಧುರಂಧರ್ 2’ ಚಿತ್ರದ ಆದಾಯದಲ್ಲಿ 500 ಕೋಟಿ ರೂಪಾಯಿ ಪಾಲು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂಬ ಹೇಳಿಕೆಗಳು ವೈರಲ್ ಆಗಿವೆ . ಈ ಹಣವನ್ನು ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಬಳಸುತ್ತೇವೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ .
“ ರಸ್ತೆಗಳು ಸರಿಯಾಗಿದ್ರೆ ಮಕ್ಕಳು ಸುರಕ್ಷಿತವಾಗಿ ಓಡಾಡಬಹುದು. ದಯವಿಟ್ಟು ನಮಗೆ ಸಹಾಯ ಮಾಡಿ” ಎಂದು ಮನವಿ ಮಾಡಿರುವ ವಿಡಿಯೋ ಮತ್ತು ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಆದರೆ ಈ ಬೇಡಿಕೆಯನ್ನು ನೆಟ್ಟಿಗರು ಗಂಭೀರವಾಗಿ ಪರಿಗಣಿಸದೇ ಟ್ರೋಲ್ ಮಾಡುತ್ತಿದ್ದಾರೆ. ಸಿನಿಮಾ ಆದಾಯದಲ್ಲಿ ಇಂತಹ ಬೇಡಿಕೆ ಇಡುವುದು ಅಸಂಬದ್ಧ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ‘ಧುರಂಧರ್ 2’ ಸಿನಿಮಾ ಸಕ್ಸಸ್ ಜೊತೆ ಇಂತಹ ವಿಚಿತ್ರ ವಿವಾದವೂ ಹುಟ್ಟಿಕೊಂಡಿದ್ದು, ಇದೀಗ ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ವಿಷಯವಾಗಿದೆ .
