Ashwaveega News 24×7 ಮಾರ್ಚ್ 10 – 2026 : ಭಾರತಿನಗರದಲ್ಲಿ ನಡೆದ ವಿಚಿತ್ರ ಘಟನೆಯೊಂದರಲ್ಲಿ , ಐಟಿ ಇಲಾಖೆಯ ಅಧಿಕಾರಿ ಗಿಳಿಶಾಸ್ತ್ರ ಎಂಬ ದೋಖಾದ ಎದುರಾಗಿ 94 ಗ್ರಾಂ ಚಿನ್ನಾಭರಣ ಕಳೆದುಕೊಂಡಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ರಸ್ತೆಯಲ್ಲಿ ಆರೋಪಿ ಶೇಖರ್ ಅವರನ್ನು ಭೇಟಿಯಾದ ಐಟಿ ಅಧಿಕಾರಿ, ಶೇಖರ್ ತನ್ನನ್ನು “ನಿನಗೆ ಒಳ್ಳೆದಾಗುತ್ತೆ” ಎಂದು ಹೇಳುತ್ತ, ಜೀವನ ಸುಧಾರಣೆಗೆ ಪೂಜೆ ಮಾಡಿಸಬೇಕು ಎಂದು ಸೂಚಿಸಿದ್ದರು. ಇದಕ್ಕಾಗಿ ಮೊದಲ ಹಂತದಲ್ಲಿ 50 ಸಾವಿರ ರೂಪಾಯಿ ಪಡೆದಿದ್ದ ಶೇಖರ್, ನಂತರ ಅಧಿಕಾರಿಗೆ ನಿಯಮಿತವಾಗಿ ಕರೆ ಮಾಡುತ್ತ , ವರ್ಗಾವಣೆಗೆ ಸಂಬಂಧಿಸಿದಂತೆ ಸಲಹೆ ನೀಡಿದನು.
ಶೇಖರ್ ಐಟಿ ಅಧಿಕಾರಿಗೆ ದೊಡ್ಡ ಪೂಜೆ ಮಾಡಬೇಕು , ಚಿನ್ನಾಭರಣ ತೆಗೆದುಕೊಂಡು ಬಾ ಎಂದು ತಿಳಿಸಿದ್ದು, ಅಧಿಕಾರಿ ಗಿಳಿಶಾಸ್ತ್ರದ ಮಾತನ್ನು ನಂಬಿ 94 ಗ್ರಾಂ ಚಿನ್ನಾಭರಣ ಮತ್ತು ಕೆಜಿಗಟ್ಟಲೆ ಬೆಳ್ಳಿ ನೀಡಿದರು . ಶೇಖರ್ “ಒಂದು ದಿನದಲ್ಲಿ ವಾಪಸ್ ತಂದು ಕೊಡ್ತೀನಿ” ಎಂದು ಭರವಸೆ ನೀಡಿದರೂ, ಚಿನ್ನಾಭರಣ ವಾಪಸ್ ನೀಡದೇ ಮಾಕ್ಮಲ್ ಟೋಪಿ ಹಾಕಿದಾನೆ .
ಈ ಮೋಸ ಘಟನೆ ಬಗ್ಗೆ ಐಟಿ ಅಧಿಕಾರಿ ಭಾರತಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು, ಮತ್ತು ಈಗ ಪೊಲೀಸರು ಆರೋಪಿ ಶೇಖರ್ ವಿರುದ್ಧ ಹುಡುಕಾಟ ನಡೆಸುತ್ತಿದ್ದಾರೆ . ಈ ಘಟನೆ ಅಧಿಕಾರಿ ವರ್ಗಾವಣೆ ಅಥವಾ ವರ್ಗಾವಣೆ ಸಲಹೆಗಾಗಿ ಕೊಡುವ ಹಣ – ಚಿನ್ನದ ಮೋಸಕ್ಕೆ ಜಾಗರೂಕತೆಯ ಅಗತ್ಯವನ್ನು ಮತ್ತೆ ಒತ್ತಿ ಹೇಳಿದ್ದಾನೆ .
