Ashwaveega News 24×7 ಜನವರಿ 07 -Pavithra Gowda Birthday : ಮಗಳು ಖುಷಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಅಮ್ಮನಿಗೆ ಬರ್ತ್ಡೇಗೆ ವಿಶ್ ಮಾಡಿದ್ದಾರೆ.
ರೇಣುಕಾಸ್ವಾಮಿ ಕೇಸ್ನಲ್ಲಿ (Renukaswamy case) ಜೈಲು ಸೇರಿರುವ ಪವಿತ್ರಾ ಗೌಡ (Pavithra Gowda) ಕಂಬಿ ಎಣಿಸುತ್ತಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವಂತಹ ಪವಿತ್ರಾ ಗೌಡ ಅವರು ಈ ಬಾರಿ ಬರ್ತ್ಡೇ ದಿನ ಜೈಲಿನಲ್ಲಿದ್ದು ಮೌನವಾಗಿ ಒಬ್ಬಂಟಿಯಾಗಿ ಹುಟ್ಟುಹಬ್ಬ ಆಚರಿಸುವಂತಾಗಿದೆ.
ಈ ವೇಳೆ ಅವರ ಮಗಳು ಖುಷಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ನನ್ನ ಫಾರೆವರ್ ಕ್ಯೂಟಿಗೆ ಹ್ಯಾಪಿ ಬರ್ತ್ಡೇ” ಅಂತ ಅಮ್ಮನಿಗೆ ಬರ್ತ್ಡೇಗೆ ವಿಶ್ ಮಾಡಿದ್ದಾರೆ. ಅವರು ಅಮ್ಮನ ಚಂದದ ಫೋಟೋವನ್ನು ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿ ಶುಭಾಶಯಗಳನ್ನು ತಿಳಿಸಿದ್ದಾರೆ.
