Ashwaveega News 24×7 ಏಪ್ರಿಲ್ 9 – 2026 : ಬಾಗಲಕೋಟೆ ಬೈಎಲೆಕ್ಷನ್ ಅಖಾಡದಲ್ಲಿ ಯುವತಿಯರು ಮತ್ತು ಮಹಿಳಾ ಮತದಾರರನ್ನು ಮನೋರಂಜನಾತ್ಮಕವಾಗಿ ಸ್ವಾಗತಿಸಲು ಪಿಂಕ್ ಬೂತ್ ಸ್ಥಾಪಿಸಲಾಗಿದೆ. ಹಕ್ಕು ಚಲಾವಣೆಗಾಗಿ ಆಗಮಿಸಿರುವ ಮತದಾರರು ಬೂತ್ ಪ್ರವೇಶಿಸಿದಾಗ ಪಿಂಕ್ ಬಲೂನ್, ಬಟ್ಟೆ ಮತ್ತು ಅಲಂಕಾರಿಕ ವಸ್ತುಗಳಿಂದ ಮಾಡಲಾಗುತ್ತಿದೆ.
ಮಹಿಳಾ ಮತದಾರರ ಅನುಕೂಲಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ಈ ಪಿಂಕ್ ಬೂತ್ ಮತದಾನ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಮತದಾರರಲ್ಲಿ ಉತ್ಸಾಹ ಮೂಡಿಸಲು ಪ್ರಮುಖ ಸಾಧನವಾಗಿದೆ. ಯುವತಿ ಮತ್ತು ಮಹಿಳೆಯರು ತಮ್ಮ ಹಕ್ಕು ಚಲಾಯಿಸಲು ಉತ್ಸಾಹದಿಂದ ಬೂತ್ ಪ್ರವೇಶಿಸುತ್ತಿದ್ದಾರೆ.
ಈ ಮೂಲಕ ಮತದಾನ ಶಾಂತಿಯುತ ವಾತಾವರಣದಲ್ಲಿ ನಡೆಯುತ್ತಿದ್ದು, ಮತದಾರರಲ್ಲಿ ರಾಜಕೀಯ ಪ್ರಕ್ರಿಯೆಯ ಬಗ್ಗೆ ಉತ್ಸಾಹ ಹೆಚ್ಚಿಸುತ್ತಿದೆ.
