Ashwaveega News 24×7 ಏಪ್ರಿಲ್ 9 – 2026 : ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ PSI ನೇತ್ರಾವತಿ ವರ್ತನೆ ವಿವಾದಕ್ಕೆ ಕಾರಣವಾಗಿದೆ. ತನ್ನ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಪೊಲೀಸ್ ಸಿಬ್ಬಂದಿಗೆ ಕಠಿಣ ಶಿಕ್ಷೆ ನೀಡಿದ ಆರೋಪ ಕೇಳಿಬಂದಿದೆ .
ASI ಸೇರಿದಂತೆ 12 ಪೊಲೀಸ್ ಸಿಬ್ಬಂದಿಯನ್ನು ಮಧ್ಯಾಹ್ನ 2ರಿಂದ 5ರವರೆಗೆ ರಣಬಿಸಿಲಿನಲ್ಲಿ ನಿಲ್ಲಿಸಿ, ಅದೂ ಬಂದೂಕು ಹೊತ್ತು ನಿಲ್ಲುವಂತೆ ಶಿಕ್ಷೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಕಠಿಣ ಕ್ರಮದಿಂದ ಕೆಲ ಸಿಬ್ಬಂದಿಗಳ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ, ಹೊಳಲ್ಕೆರೆ ಆಸ್ಪತ್ರೆಗೆ ದಾಖಲಾಗಿದ್ದಾರೆ .
ಈ ಘಟನೆಯ ಹಿನ್ನೆಲೆಯಲ್ಲಿ ಸಿಬ್ಬಂದಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದು, Arun Gowda ತನಿಖೆ ಆರಂಭಿಸಿದ್ದಾರೆ. ತಕ್ಷಣ ಕ್ರಮ ಕೈಗೊಂಡ ಅಧಿಕಾರಿಗಳು PSI ನೇತ್ರಾವತಿಯನ್ನು ಚಿಕ್ಕಜಾಜೂರು ಠಾಣೆಯಿಂದ ಎತ್ತಂಗಡಿ ಮಾಡಿ ಜಿಲ್ಲಾ ನಿಯಂತ್ರಣ ಕೊಠಡಿಗೆ ವರ್ಗಾವಣೆ ಮಾಡಿದ್ದಾರೆ .
ಈ ಬಗ್ಗೆ ಆದೇಶವನ್ನು ಚಿತ್ರದುರ್ಗ ಎಸ್ಪಿ Ranjith Kumar Bandaru ನೀಡಿದ್ದಾರೆ. PSI ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಹೊರಬಂದ ಬಳಿಕ ಪೊಲೀಸ್ ಸಿಬ್ಬಂದಿಯಲ್ಲಿ ಸಂತೋಷ ವ್ಯಕ್ತವಾಗಿದೆ .
ಒಟ್ಟಾರೆ, ಪೊಲೀಸ್ ಇಲಾಖೆಯೊಳಗಿನ ಶಿಸ್ತಿನ ವಿಚಾರದಲ್ಲಿ ಈ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಮೇಲಾಧಿಕಾರಿಗಳ ತಕ್ಷಣದ ಕ್ರಮ ಗಮನ ಸೆಳೆಯುತ್ತಿದೆ .
