Ashwaveega News 24×7 ಏಪ್ರಿಲ್ 1 – 2026 : ನಟ ಮತ್ತು ನಿರ್ದೇಶಕ ಉಪೇಂದ್ರ ತಮ್ಮ ಪ್ರಜಾಕೀಯ ಪಕ್ಷದ ಚಟುವಟಿಕೆಯನ್ನು “ದಿ ರಿಯಲ್ ಪ್ರಜಾಕೀಯ” ಮೂಲಕ ಪ್ರತ್ಯಕ್ಷ ಮಾಡಿದ್ದಾರೆ. ಈ ವೇದಿಕೆ ಮೂಲಕ ಜನರು ಮತ್ತು ಪ್ರಜಾಕೀಯ ನಡುವಿನ ನೇರ ಸಂಪರ್ಕಕ್ಕೆ ಹೊಸ ಆ್ಯಪ್ ಅನ್ನು ಪರಿಚಯಿಸಿದ್ದಾರೆ, ಇದರಿಂದ ಆಡಳಿತ ಬದಲಾವಣೆಗೆ ದಾರಿ ತೋರಲು ಉಪೇಂದ್ರ ಮುಂದಾಗಿದ್ದಾರೆ.
ಉಪೇಂದ್ರ ಅವರು ಪ್ರಜಾಕೀಯ ಪಕ್ಷವನ್ನು ಜನರ ಮುಂದೆ ಮತ್ತೆ ತರುವ ಪ್ರಯತ್ನ ಮಾಡುತ್ತಿರುವುದು ಗಮನಾರ್ಹ. ಇಂಟರ್ನೆಟ್ ಮೂಲಕ ಜನರೊಂದಿಗೆ ನಿರಂತರ ಸಂಪರ್ಕ ಸಾಧಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಉಪ್ಪಿ ನಿರ್ಧಾರ ಸ್ಪಷ್ಟಪಡಿಸಿದ್ದು, “ಪ್ರಜಾಕೀಯ ಪಕ್ಷ ಕೋಮಾದಲ್ಲಿಲ್ಲ; ಜನರು ಜಾಲತಾಣದ ಕಮೆಂಟ್ಸ್ ನೋಡಿ ನಮ್ಮ ಬಗ್ಗೆ ನಿರ್ಧಾರ ಮಾಡಬೇಡಿ” ಎಂದಿದ್ದಾರೆ.
ಅವರು ಎಲೆಕ್ಷನ್ನಲ್ಲಿ ನಿಲ್ಲಬೇಕೆಂಬುದು ಪ್ರಮುಖ ಉದ್ದೇಶವಲ್ಲ; ಮೊದಲು ಜನರಿಗೆ ಅವಕಾಶ ನೀಡುವುದೇ ಮುಖ್ಯವೆಂದು ತಿಳಿಸಿದರು. ರಾಜಕೀಯ ಲೆಫ್ಟ್-ರೈಟ್ ವಲಯಗಳ ಬಗ್ಗೆ, “ನಾನು ಲೆಫ್ಟ್ ಅಲ್ಲ, ರೈಟ್ ಕೂಡ ಅಲ್ಲ; ಎಲ್ಲವನ್ನೂ ಬಿಟ್ಟು ಸ್ಟ್ರೈಟ್ ಆಗಿದ್ದೀನಿ” ಎಂದು ಉಪ್ಪಿ ಹೇಳಿದರು.
ಇತ್ತೀಚೆಗೆ, ತಮ್ಮ ಪ್ರಜಾಕೀಯ ಕನಸುಗಳನ್ನು ಬಹಿರಂಗಪಡಿಸಿ, ಉಪೇಂದ್ರ ಪ್ರಜೆಗಳ ನೇರ ಸಂಪರ್ಕಕ್ಕೆ ವಿಶಿಷ್ಟ ವೇದಿಕೆಯನ್ನು ನಿರ್ಮಿಸಿದ್ದು, ಸ್ವತಂತ್ರವಾಗಿ, ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಪ್ರಜಾಕೀಯ ಚಟುವಟಿಕೆಯಲ್ಲಿಯೇ ತಮ್ಮ ಪಾತ್ರವನ್ನು ಮತ್ತೊಮ್ಮೆ ದೃಢಪಡಿಸಿದ್ದಾರೆ.
