Ashwaveega News 24×7 ಮಾರ್ಚ್ 20 – 2026 : ದೇಶಾದ್ಯಂತ ಪ್ರೀಮಿಯಂ ಪೆಟ್ರೋಲ್ ದರದಲ್ಲಿ ಏರಿಕೆ ಮಾಡಲಾಗಿದ್ದು, ವಾಹನ ಸವಾರರಿಗೆ ಶಾಕ್ ಎದುರಾಗಿದೆ. ತೈಲ ಕಂಪನಿಗಳು ತಕ್ಷಣದಿಂದಲೇ ಹೊಸ ದರ ಜಾರಿಗೊಳಿಸಿರುವುದಾಗಿ ಘೋಷಿಸಿವೆ.
ಪ್ರೀಮಿಯಂ ಪೆಟ್ರೋಲ್ ದರ ಲೀಟರ್ಗೆ ಸುಮಾರು 2.35 ರೂಪಾಯಿ ಹೆಚ್ಚಳವಾಗಿದೆ. ಪ್ರಾಂತ್ಯವನ್ನು ಆಧರಿಸಿ 2.09 ರೂಪಾಯಿಯಿಂದ 2.35 ರೂಪಾಯಿವರೆಗೆ ಏರಿಕೆ ಕಂಡುಬಂದಿದೆ. ಇದೇ ವೇಳೆ BPCL ನ ‘ಸ್ಪೀಡ್’ ಹಾಗೂ IOCL ನ ‘ಎಕ್ಸ್ಪಿ95’ ಪ್ರೀಮಿಯಂ ಪೆಟ್ರೋಲ್ ದರಗಳಲ್ಲಿಯೂ ಏರಿಕೆ ಮಾಡಲಾಗಿದೆ.
ಜಾಗತಿಕ ಯುದ್ಧ ಪರಿಸ್ಥಿತಿ ಹಾಗೂ ಕಚ್ಚಾ ತೈಲದ ಬೆಲೆ ಏರಿಕೆಯ ಪರಿಣಾಮ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತೈಲ ಕಂಪನಿಗಳು ಸ್ಪಷ್ಟಪಡಿಸಿವೆ. ಆದರೆ ಸಾಮಾನ್ಯ ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎನ್ನುವುದು ಗ್ರಾಹಕರಿಗೆ ಸ್ವಲ್ಪ ಮಟ್ಟಿನ ಸಮಾಧಾನ ನೀಡಿದೆ .
ಒಟ್ಟಿನಲ್ಲಿ, ಪ್ರೀಮಿಯಂ ಇಂಧನ ಬಳಕೆದಾರರಿಗೆ ಈ ದರ ಏರಿಕೆ ಹೆಚ್ಚುವರಿ ಭಾರ ತಂದಿದ್ದು, ಮುಂದಿನ ದಿನಗಳಲ್ಲಿ ಇಂಧನ ಮಾರುಕಟ್ಟೆ ಇನ್ನಷ್ಟು ಅಸ್ಥಿರವಾಗುವ ಸಾಧ್ಯತೆ ಇದೆ .
