
ಪ್ರೋ ಕಬ್ಬಡಿ ಲೀಗ್ನಲ್ಲಿ ಬೆಂಗಳೂರು ಬುಲ್ಸ್ ತಂಡಕ್ಕೆ ಹೊಸ ಕೋಚ್ ನೇಮಕಗೊಂಡಿದ್ದಾರೆ. ಪುಣೆ ತಂಡಕ್ಕೆ ಕೋಚ್ ಆಗಿದ್ದ ಕನ್ನಡಿಗ ಬಿ.ಸಿ.ರಮೇಶ್ ಇದೀಗ ಬುಲ್ಸ್ ತಂಡಕ್ಕೆ ಕೋಚ್ ಆಗಿದ್ದಾರೆ. ಈ ಕುರಿತು ಬೆಂಗಳೂರು ಫ್ರಾಂಚೈಸಿ ತಂಡ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಕಳೆದ 11 ಸೀಸನ್ಗೆ ರಣಧೀರ್ ಸಿಂಗ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಕಳೆದ ಸೀಸನ್ ಬುಲ್ಸ್ ಅತ್ಯಂತ ಕಳಪೆ ಪ್ರದರ್ಶನದಿಂದ ಫ್ಲೇ ಆಫ್ ಹಂತಕ್ಕೇರಲು ವಿಫಲಗೊಂಡಿತ್ತು. ಹೀಗಾಗಿ ಫ್ರಾಂಚೈಸಿ ಬದಲಿ ಕೋಚ್ ಹುಡುಕಾಟದಲ್ಲಿತ್ತು. ಪ್ರೋ ಕಬ್ಬಡಿ ಟೂರ್ನಿಯಲೇ ಯಶಸ್ವಿ ಕೋಚ್ ಎನ್ನಿಸಿಕೊಂಡಿರುವ ಬಿ.ಸಿ ರಮೇಶ್ ಬುಲ್ಸ್ ತಂಡದ ಕೋಚ್ ಆಗಿ ಆಯ್ಕೆಯಾಗಿದ್ದು ಈ ಬಾರಿ ಕನ್ನಡಿಗನ ಸಾರಥ್ಯದಲ್ಲಿ ತಂಡ ಕಣಕ್ಕಿಳಿಯಲಿದೆ. ಈ ಹಿಂದೆ ರಮೇಶ್ರವರು ಬೆಂಗಾಲ್ ವಾರಿಯರ್ಸ್, ಪುಣೇರಿ ಪಲ್ಟನ್ ತಂಡಕ್ಕೆ ಕೋಚ್ ಆಗಿ ತಂಡವನ್ನ ಚಾಂಪಿಯನ್ ಆಗಿ ಮಾಡಿದ್ದರು. ಬುಲ್ಸ್ ತಂಡಕ್ಕೂ ಸೀಸಿನ್ 6ರಲ್ಲಿ ರಣಧೀರ್ ಸಿಂಗ್ ಜೊತೆ ಕೆಲಸ ಮಾಡಿ ತಂಡ ಚಾಂಪಿಯನ್ ಆಗುವಂತೆ ಮಾಡಿದ್ದರು. ಈಗ ಮತ್ತೆ ಬುಲ್ಸ್ ತಂಡಕ್ಕೆ ಕನ್ನಡಿಗ ರಮೇಶ್ ಎಂಟ್ರಿಯಿಂದ ಅಭಿಮಾನಿಗಳಿಗೆ ಸಖತ್ ಖುಷಿಯಾಗಿದೆ .
