Ashwaveega News 24×7 ಮಾರ್ಚ್ 19 – 2026 : ಜಪಾನ್ನ ಮೃಗಾಲಯವೊಂದರಲ್ಲಿ ತಾಯಿಯಿಂದ ತಿರಸ್ಕೃತಗೊಂಡು, ಇತರ ಕೋತಿಗಳ ಕಿರುಕುಳದಿಂದ ಸಂಕಷ್ಟ ಅನುಭವಿಸುತ್ತಿದ್ದ ‘ಪಂಚ್’ ಎಂಬ ಕೋತಿಗೆ ಇದೀಗ ಹೊಸ ಬದುಕು ದೊರಕಿದಂತಾಗಿದೆ.
ದೀರ್ಘಕಾಲ ಒಂಟಿತನದಲ್ಲಿದ್ದ ಪಂಚ್, ಭಯ ಮತ್ತು ಆತಂಕದಿಂದ ತನ್ನ ಪ್ರಿಯ ಗೊಂಬೆಯನ್ನು ಅಪ್ಪಿಕೊಂಡೇ ಸಮಯ ಕಳೆಯುತ್ತಿತ್ತು. ಇತರ ಕೋತಿಗಳ ದಾಳಿಯಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ ಈ ಕೋತಿಯ ಸ್ಥಿತಿ ನೋಡುಗರ ಮನಕಲಕುವಂತಿತ್ತು.
ಆದರೆ ಇದೀಗ ಪಂಚ್ ಜೀವನದಲ್ಲಿ ಹೊಸ ತಿರುವು ಕಂಡುಬಂದಿದೆ. ಅದಕ್ಕೆ ಹೊಸ ಸಂಗಾತಿ ಸಿಕ್ಕಿದ್ದು, ಇಬ್ಬರ ನಡುವಿನ ಸ್ನೇಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹೊಸ ಗೆಳತಿ ಪಂಚ್ ಬಳಿ ಸದಾ ಇರುವುದಲ್ಲದೆ, ಪ್ರತೀ ಐದು-ಹತ್ತು ನಿಮಿಷಕ್ಕೊಮ್ಮೆ ಬಂದು ಅದನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತಿರುವುದು ವಿಶೇಷ.

ಈ ಹೊಸ ಸಂಬಂಧದಿಂದ ಪಂಚ್ ತನ್ನ ಗೊಂಬೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದು, ಸಂತೋಷದಿಂದ ಆಟವಾಡುತ್ತ ಕಾಲ ಕಳೆಯುತ್ತಿದೆ. ಒಂಟಿತನದಿಂದ ಬಳಲುತ್ತಿದ್ದ ಕೋತಿಗೆ ಇದೀಗ ಸಾಥ್ ಸಿಕ್ಕಿರುವುದು ಮೃಗಾಲಯ ಸಿಬ್ಬಂದಿಯಲ್ಲೂ ಸಂತೋಷ ತಂದಿದೆ.
ಒಟ್ಟಿನಲ್ಲಿ, ಪ್ರಾಣಿಗಳ ನಡುವಿನ ಈ ಅಪ್ಪಟ ಸ್ನೇಹ ಮತ್ತು ಪ್ರೀತಿ ನೋಡುಗರ ಮನಗೆದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹೃದಯಸ್ಪರ್ಶಿ ಕ್ಷಣವಾಗಿ ಗಮನ ಸೆಳೆಯುತ್ತಿದೆ.
