ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು , ಪುಷ್ಪ 2 ಸಿನಿಮಾದ ಟ್ರೇಲರ್ ನೋಡಿದ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ . ಟ್ರೈಲರ್ನಲ್ಲಿ ಅಲ್ಲು ಅರ್ಜುನ್ ಅಬ್ಬರ ಕಂಡು ಸಿನಿಪ್ರಿಯರು ಫುಲ್ ಫಿದಾ ಆಗಿದ್ದಾರೆ. ಸಿನಿಮಾದಲ್ಲಿ ಪುಷ್ಪ 2 ಚಿತ್ರದ ಟ್ರೇಲರ್ ಗೆ ನಿರ್ದೇಶಕ ಸುಕುಮಾರ್ ಪವರ್ ಪ್ಯಾಕ್ಡ್ ಆ್ಯಕ್ಷನ್ ಗಳನ್ನು ತುಂಬಿದ್ದಾರೆ. ಇದೀಗ ಟ್ರೈಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಈ ಸಿನಿಮಾ ಭಾರತೀಯ ಸಿನಿಮಾ ಇತಿಹಾದಸಲ್ಲೇ ವಿಭಿನ್ನ ದಾಖಲೆಯೊಂದನ್ನು ಮಾಡಿದೆ ಎಂದು ಸಿನಿಮಾ ತಂಡ ಎಕ್ಸ್ ಟ್ವೀಟ್ ಮೂಲಕ ಬಹಿರಂಗಪಡಿಸಿಕೂಂಡಿದ್ದಾರೆ …
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪಾ 2 ಟ್ರೈಲರ್ ನವೆಂಬರ್ 17 ಬಿಹಾರದ ಪಾಟ್ನಾದಲ್ಲಿ ಅದ್ಧೂರಿಯಾಗಿ ಲಾಂಚ್ ಮಾಡಲಾಯಿತು. ಪಾಟ್ನಾದಲ್ಲಿ ಬಿಡುಗಡೆಯಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಬರೋಬ್ಬರಿ 2 ಲಕ್ಷ ಜನ ಸೇರಿದ್ದರು. ಆ ಮೂಲಕ ಪುಷ್ಪಾ-2 ಟ್ರೈಲರ್ ಅನ್ನು ಸಿನಿಮಾ ತಂಡ ಅದ್ಧೂರಿಯಾಗಿ ಬಿಡುಗಡೆ ಮಾಡಲಾಯಿತು. ಇದೀಗ ಟ್ರೇಲರ್ ಬಿಡುಗಡೆಯಾದ ಕಲವೇ ಗಂಟೆಯಲ್ಲಿ ವಿಶೇಷ ದಾಖಲೆಯೊಂದನ್ನು ಬರೆದಿದೆ…
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಪುಷ್ಪಾ-2 ಸಿನಿಮಾದ ಟ್ರೇಲರ್ ಇಂಟರ್ನೆಟ್ ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಮೈತ್ರಿ ಮೂವಿ ಮೇಕರ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಎಲ್ಲಾ ಭಾಷೆಗಳಲ್ಲಿ ಲಕ್ಷಾಂತರ ಜನ ಈ ಸಿನಿಮಾ ಟ್ರೇಲರ್ ಬಿಡುಗಡೆಯಾದ ಬಳಿಕ ವೇಗವಾಗಿ 40 ಮಿಲಿಯನ್ಗೂ ಹೆಚ್ಚು ವೀಕ್ಷಣೆ ಮತ್ತು 1.4 ಮಿಲಿಯನ್ಗೂ ಅಧಿಕ ಲೈಕ್ಸ್ ಅನ್ನು ಪಡೆದ ಭಾರತದ ಮೊದಲ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದು ಭಾರತೀಯ ಸಿನಿಮಾ ಇತಿಹಾಸದಲ್ಲೆ ಅತ್ಯಂತ ವೇಗದ ಸಾಧನೆ ಮಾಡಿದೆ ….
ಸುಕುಮಾರ್ ನಿರ್ದೇಶನದ ಪುಷ್ಪ ಚಿತ್ರದ ಮುಂದುವರಿದ ಭಾಗವಾಗಿ ಪುಷ್ಪ 2 ಬರುತ್ತಿದೆ. ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ, ಫಹದ್ ಫಾಜಿಲ್, ಧನಂಜಯ, ಜಗದೀಶ್ ಪ್ರತಾಪ್ ಭಂಡಾರಿ ಮತ್ತು ಇತರರು ನಟಿಸಿದ್ದಾರೆ. ಪುಷ್ಪ 2 ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸದ್ಯ ಡಬ್ಬಿಂಗ್ ಕಾರ್ಯಕ್ರಮಗಳು ಅಂತಿಮ ಹಂತದಲ್ಲಿವೆ.
ಪುಷ್ಪ 2 ಡಿಸೆಂಬರ್ 5 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾದ ವಿಶೇಷ ಹಾಡಿಗೆ ಶ್ರೀಲೀಲಾ ಆಯ್ಕೆಯಾಗಿದ್ದರು. ಈಗಾಗಲೇ ಈ ಸಿನಿಮಾದಿಂದ ಬಿಡುಗಡೆಯಾಗಿರುವ ಪೋಸ್ಟರ್, ಟೀಸರ್, ಹಾಡುಗಳು ಸಿನಿಮಾದ ಹೈಪ್ ಹೆಚ್ಚಿಸಿವೆ. ಈ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಲು ಪ್ರೇಕ್ಷಕರು ಅದರಲ್ಲೂ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.