ಬೆಂಗಳೂರು : ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ನಿಧನರಾಗಿದ್ದು, ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸರೋಜಾ ಅವರು ನಿಧನರಾಗಿದ್ದಾರೆ.
ಈ ಹಿನ್ನೆಲೆ ಸುದೀಪ್ ತಾಯಿ ಅಂತಿಮ ದರ್ಶನ ಪಡೆಯಲು ರಾಘವೇಂದ್ರ ರಾಜ್ಕುಮಾರ್ ಕುಟುಂಬ, ನಟನ ನಿವಾಸಕ್ಕೆ ಭೇಟಿ ನೀಡಿ, ಸುದೀಪ್ ತಾಯಿ ಸರೋಜಾ ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ‘ವಿಕ್ರಾಂತ್ ರೋಣ’ ಡೈರೆಕ್ಟರ್ ಅನೂಪ್ ಭಂಡಾರಿ ಕೂಡ ಆಗಮಿಸಿದ್ದಾರೆ.