
ಬೆಂಗಳೂರು: ಬೆಂಗಳೂರಿನ ಕಂಟೋನ್ಸೆಂಟ್ (ದಂಡು) ರೈಲು ನಿಲ್ದಾಣದ ಮರು ಅಭಿವೃದ್ಧಿ ಕಾಮಗಾರಿ ಹಿನ್ನೆಲೆ, ಸೆಪ್ಟೆಂಬರ್ 20ರಿಂದ ಡಿಸೆಂಬರ್ 20ರವರೆಗೆ 92 ದಿನಗಳ ಕಾಲ 41 ರೈಲುಗಳ ನಿಲುಗಡೆ ರದ್ದುಗೊಳ್ಳಲಿದೆ.
ದುರಸ್ತಿ ಮಾಹಿತಿಗಳು:
ನಿಲ್ದಾಣದ ಮೊದಲ ಮತ್ತು ಎರಡನೇ ಪ್ಲಾಟ್ಫಾರ್ಮ್ ಸ್ಥಗಿತಗೊಳ್ಳಲಿರುವುದರಿಂದ, ಬಂದು ಹೋಗುವ ರೈಲುಗಳ ನಿಲುಗಡೆ ರದ್ದಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಿಸಿದೆ.
ನಿಲುಗಡೆ ರದ್ದಾದ ರೈಲುಗಳು:
- ಪ್ರತಿದಿನ ಸಂಚರಿಸುವ ಮೈಸೂರು-ಎಸ್ಎಮ್ವಿಟಿ ಬೆಂಗಳೂರು ರೈಲು (06269) – ಸೆಪ್ಟೆಂಬರ್ 19 ರಿಂದ ಡಿಸೆಂಬರ್ 19ರವರೆಗೆ
- ವಾರಕ್ಕೊಮ್ಮೆ ಸಂಚರಿಸುವ ಮೈಸೂರು ರೇಣಿಗುಂಟ (22135) ರೈಲು
- 6 ದಿನಕ್ಕೊಮ್ಮೆ ಸಂಚರಿಸುವ ಕೆಎಸ್ಆರ್ ಬೆಂಗಳೂರು – ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್
- ಕೆಎಸ್ಆರ್ ಬೆಂಗಳೂರು-ಎರ್ನಾಕುಲಂ ರೈಲು (12677)
- ಪ್ರತಿದಿನದ ಕೆಎಸ್ಆರ್ ಬೆಂಗಳೂರು – ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ (12608)
- ಮುರ್ಡೇಶ್ವರ-ಎಸ್ಎಂವಿಟಿ ಬೆಂಗಳೂರು (16586)
- ಕೆಎಸ್ಆರ್ ಬೆಂಗಳೂರು-ಮಾರಿಕುಪ್ಪಂ (06396)
- ಕೆಎಸ್ಆರ್ ಬೆಂಗಳೂರು-ಶ್ರೀ ಸತ್ಯಸಾಯಿ ಪ್ರಶಾಂತಿನಿಲಯಂ (06515)
- ಮೈಸೂರು-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ (06515)
- ಕೆಎಸ್ಆರ್ ಬೆಂಗಳೂರು-ಕೋಲಾರ (06387)
- ಕೆಎಸ್ಆರ್ ಬೆಂಗಳೂರು-ಭುವನೇಶ್ವರ (18464)
- ಕೆಎಸ್ಆರ್ ಬೆಂಗಳೂರು – ಜೋಳಪಟ್ಟಿ (06551)
- ಕೆಎಸ್ಆರ್ ಬೆಂಗಳೂರು – ವೈಟ್ಫೀಲ್ಡ್ (01765)
- ಕೆಎಸ್ಆರ್ ಬೆಂಗಳೂರು – ಬಂಗಾರಪೇಟೆ (06561/06389)
- ಕೆಎಸ್ಆರ್ ಬೆಂಗಳೂರು – ಕುಪ್ಪಂ (06529/01775)
- ವಾರಕ್ಕೆ ಎರಡು ಬಾರಿ ಮೈಸೂರು-ಜೈಪುರ (12975) – ಸೆಪ್ಟೆಂಬರ್ 21 ರಿಂದ ಡಿಸೆಂಬರ್ 19ರವರೆಗೆ
- ಮೈಸೂರು-ಕೂಚುವೇಲಿ (16315)
- ಮೈಸೂರು-ಕಾಚಿಗುಡ (12786)
- ಕೆಎಸ್ಆರ್ ಬೆಂಗಳೂರು-ಧರ್ಮಪುರಿ
- ಕೆಎಸ್ಆರ್ ಬೆಂಗಳೂರು-ನವದೆಹಲಿ (12627)
- ಕೆಎಸ್ಆರ್ ಬೆಂಗಳೂರು-ಸಿಎಸ್ಎಂಟಿ ಮುಂಬೈ (1302)
- ಬೆಂಗಳೂರು-ದೇಬ್ ನಾಂದೇಡ್ (16593) – ಸೆಪ್ಟೆಂಬರ್ 20ರಿಂದ ಡಿಸೆಂಬರ್ 20ರವರೆಗೆ