
ಐಪಿಎಲ್ 2025ರ ಟೂರ್ನಿಗೆ ದಿನಗಣನೆ ಶುರುವಾಗಿದೆ. ಜಗತ್ತಿನ ಶ್ರೀಮಂತ ಕ್ರೀಡೆಗೆ ಫ್ಯಾನ್ಸ್ ಕೂಡ ತುದಿಗಾಲಲ್ಲಿ ಎದುರು ನೋಡುತ್ತಿದ್ದಾರೆ. ಇತ್ತ ಸೀಸನ್ 2008ರ ಚಾಂಪಿಯನ್ಸ್ ರಾಜಸ್ಥಾನ್ ರಾಯಲ್ಸ್ ತಂಡ ತನ್ನ ನೂತನ ಜೆರ್ಸಿಯನ್ನ ಅನಾವರಣಗೊಳಿಸಿದೆ. ಪಿಂಕ್ ಕಲರ್ನಲ್ಲಿ ಕಂಗೊಳಿಸುತ್ತಿರುವ ಜೆರ್ಸಿಯನ್ನು ಕುಮಾರ್ ಸಂಗಾಕ್ಕರ ಹಾಗೂ ರಾಹುಲ್ ದ್ರಾವಿಡ್ ರಿವೀಲ್ ಮಾಡಿದ್ದಾರೆ. ಈ ಕುರಿತು ಫ್ರಾಂಚೈಸಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಜೆರ್ಸಿ ಹಾಗೂ ನೂತನ ಕಿಟ್ನಲ್ಲಿ ಸ್ಟಾರ್ ಆಟಗಾರರಾದ ಗ್ರೇಮ್ ಸ್ಮೀತ್, ರಾಹುಲ್ ದ್ರಾವಿಡ್, ಚಹಲ್, ಜೋಸ್ ಬಟ್ಲರ್, ಅಜಿಂಕ್ಯೆ ರಹಾನೆ, ಶೇನ್ ವ್ಯಾಟ್ಸನ್, ಟ್ರೆಂಟ್ ಬೋಲ್ಟ್, ಆರ್ ಅಶ್ವಿನ್, ಬ್ರಾಡ್ ಹಾಡ್ಜ್ ಹಾಗೂ ಆಗಲಿದ ಶೇನ್ ವಾರ್ನ್ ಅವರ ಹೆಸರು ಹಾಗೂ ಜೆರ್ಸಿ ನಂಬರ್ಗಳನ್ನು ನೂತನ ಕಿಟ್ನಲ್ಲಿ ಹಾಕಲಾಗಿದೆ.

ಅಭಿಷೇಕ್ . ಎಸ್