
ರಣಜಿ 2025ರ ಟೂರ್ನಿಯು ಸೆಮಿಫೈನಲ್ ಹಂತಕ್ಕೆ ಬಂದು ನಿಂತಿದೆ.ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ದ ಗುಜರಾತ್ ಜಯಭೇರಿ ಬಾರಿಸಿದೆ. ಎರಡನೇ ಕಾರ್ಟರ್ ಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಮಣಿಸಿ ವಿದರ್ಭ ಸೆಮಿಫೈನಲ್ಗೆ ಎಂಟ್ರಿ ಕೊಟ್ಟಿದೆ. ಇನ್ನೂ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹರಿಯಾಣವನ್ನು ಸೋಲಿಸಿ ಮುಂಬೈ ತಂಡ ಮುಂದಿನ ಹಂತಕ್ಕೆ ಕಾಲಿಟ್ಟಿದೆ.

ಕೊನೆಯದಾಗಿ ಮೊದಲ ಕ್ವಾರ್ಟರ್ ಫೈನಲ್ ಪಂದ್ಯ ಪುಣೆಯಲ್ಲಿ ನಡೆಯುತ್ತಿದ್ದು ಜಮ್ಮು ಕಾಶ್ಮೀರ ಮತ್ತು ಕೇರಳ ತಂಡ ಹೋರಾಟ ನಡೆಸುತ್ತಿವೆ. ಇದರಲ್ಲಿ ಜಯ ಗಳಿಸುವ ತಂಡ ಫೆಬ್ರವರಿ 17 ರಂದು ಗುಜರಾತ್ ವಿರುದ್ದ ಸೆಮಿಫೈನಲ್ನಲ್ಲಿ ಆಡಲಿದೆ. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ ಹಾಗೂ ಮುಂಬೈ ತಂಡಗಳು ಮುಖಾಮುಖಿಯಾಗಲಿವೆ. ಸೆಮಿಫೈನಲ್ ಪಂದ್ಯಗಳು ಮುಗಿದ ನಂತರ ಫೈನಲ್ ಪಂದ್ಯ ಇದೇ ಫೆಬ್ರವರಿ 26ರಂದು ನಡೆಯಿದೆ…
ಅಭಿಷೇಕ್ ಎಸ್