Ashwaveega News 24×7 ಫೆಬ್ರವರಿ 2026 : ಟಾಲಿವುಡ್–ಸ್ಯಾಂಡಲ್ವುಡ್ ಸಿನಿಪ್ರೇಮಿಗಳನ್ನು ಕಾತರದಿಂದ ಕಾಯಿಸುತ್ತಿದ್ದ ಸುದ್ದಿ ಇದೀಗ ಸಂಚಲನ ಮೂಡಿಸಿದೆ. ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಮದುವೆ ಸಂಭ್ರಮ ಉದಯ್ಪುರದ ಅರಮನೆಯಲ್ಲಿ ನಡೆಯುತ್ತಿದೆ ಎಂಬ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದೂರದ ರಾಜಸ್ಥಾನದ ಉದಯ್ಪುರ ಅರಮನೆಯಲ್ಲಿ ಮದುವೆಗೆ ಭರ್ಜರಿ ಸಿದ್ಧತೆಗಳು ನಡೆದಿವೆ ಅಂತೆ . ವೇದಿಕೆ ಅಲಂಕರಿಸುತ್ತಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಬ್ಬರು ಹುಡುಗಿಯರು ಮದುವೆ ತಯಾರಿ ತೋರಿಸುತ್ತಾ ಸೆಲ್ಫಿ ವಿಡಿಯೋ ಮಾಡಿರುವ ದೃಶ್ಯಗಳು, “ವಿಜಯ್ ಮತ್ತು ರಶ್ಮಿಕಾ ಮದುವೆ ಇಲ್ಲಿ ನಡೆಯಲಿದೆ” ಎಂಬ ಊಹಾಪೋಹಗಳಿಗೆ ಇನ್ನಷ್ಟು ಬಲ ನೀಡಿವೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಮೊಟ್ಟಮೊದಲಾಗಿ ‘ಗೀತಗೋವಿಂದಂ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಚಿತ್ರದ ವೇಳೆ ಆರಂಭವಾದ ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು ಎಂಬ ಮಾತುಗಳು ಆಗಲೇ ಸಿನಿವಲಯದಲ್ಲಿ ಕೇಳಿಬಂದಿದ್ದವು. ನಂತರ ‘ಡಿಯರ್ ಕಾಮ್ರೆಡ್’ ಚಿತ್ರದಲ್ಲೂ ಈ ಜೋಡಿ ಒಟ್ಟಿಗೆ ನಟಿಸಿ ಅಭಿಮಾನಿಗಳ ಮನಗೆದ್ದಿತ್ತು.
ಇದೀಗ ಪೋಷಕರ ಒಪ್ಪಿಗೆ ಪಡೆದು ‘ಗೀತಗೋವಿಂದಂ’ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ ಎಂಬ ಸುದ್ದಿ ಅಭಿಮಾನಿಗಳನ್ನು ಖುಷಿಪಡಿಸಿದೆ. ಮದುವೆಗೆ ವಿಶೇಷವಾಗಿ ಬೆಂಗಳೂರಿನಿಂದ ಹೂಗಳನ್ನು ಸರಬರಾಜು ಮಾಡಲಾಗಿದೆ ಎಂಬ ಮಾಹಿತಿ ಕೂಡ ಚರ್ಚೆಗೆ ಗ್ರಾಸವಾಗಿದೆ.
ಸದ್ಯ ವಿಜಯ್ – ರಶ್ಮಿಕಾ ಮೂರನೇ ಬಾರಿ ‘ರಣಬಾಲಿ’ ಎಂಬ ಐತಿಹಾಸಿಕ ಚಿತ್ರದಲ್ಲಿ ಜೋಡಿಯಾಗಿ ನಟಿಸುತ್ತಿದ್ದು, ವೃತ್ತಿಜೀವನದಲ್ಲೂ ಹಾಗೂ ವೈಯಕ್ತಿಕ ಜೀವನದಲ್ಲೂ ಹೊಸ ಅಧ್ಯಾಯ ಆರಂಭವಾಗುತ್ತಿರುವ ಸುಳಿವುಗಳು ದೊರಕುತ್ತಿವೆ.
ಆದರೆ ಈ ಮದುವೆ ಬಗ್ಗೆ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ. ಆದರೂ ಉದಯ್ಪುರ ಅರಮನೆಯ ಸಂಭ್ರಮ, ವೈರಲ್ ವೀಡಿಯೊಗಳು ಮತ್ತು ಸಿದ್ಧತೆಗಳು, ರಶ್ಮಿಕಾ–ವಿಜಯ್ ಮದುವೆ ಸುದ್ದಿ ಸತ್ಯಕ್ಕೆ ಬಹಳ ಹತ್ತಿರವೇ ಇದೆ ಎಂಬ ಸೂಚನೆ ನೀಡುತ್ತಿವೆ.
