
2025ರ ಐಪಿಎಲ್ ಟೂರ್ನಿ ಸಮೀಪಿಸುತ್ತಿದ್ದಂತೆ ಆರ್ಸಿಬಿಗೆ ತಲೆನೋವು ಕೂಡ ಹೆಚ್ಚಾಗುತ್ತಿದೆ. ಮೆಗಾ ಹರಾಜಿನಲ್ಲಿ ಕೋಟಿ ಕೋಟಿ ಹಣ ನೀಡಿ ಖರೀದಿ ಮಾಡಿದ ಆಟಗಾರರು ಒಂದೇ ಟೈಂನಲ್ಲಿ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದು ಆರ್ಸಿಬಿ ತಂಡ ಹಾಗೂ ಅಭಿಮಾನಿಗಳಿಗೆ ಟೆನ್ಷನ್ ಎದುರಾಗಿದೆ. ಇದಕ್ಕೆ ಕಾರಣ ಪ್ರಸ್ತುತ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ-20 ಸರಣಿ. ಈ ಸರಣಿಯಲ್ಲಿ ಆರ್ಸಿಬಿ ಖರೀದಿ ಮಾಡಿರುವ ಲಿಯಾಮ್ ಲಿವಿಂಗ್ಸ್ಟೋನ್, ಜೇಕಬ್ ಬೆಥೆಲ್, ಫಿಲ್ ಸಾಲ್ಟ್ ಈ ಮೂವರು ಬ್ಯಾಟರ್ಗಳು ಫಾರ್ಮ್ ಕಳೆದುಕೊಂಡು ರನ್ ಗಳಿಸಲು ಪರದಾಡುತ್ತಿದ್ದು ಇಂಗ್ಲೆಂಡ್ ತಂಡದ ಚಿಂತೆಗೂ ಕಾರಣವಾಗಿದೆ. ಫಿಲ್ ಸಾಲ್ಟ್ ಕಳೆದ 4 ಪಂದ್ಯದಲ್ಲಿ 0, 4, 5 , 23 ರನ್ಗಳನ್ನ ಗಳಿಸಿದ್ದಾರೆ. ಲಿಯಾಮ್ ಲಿವಿಂಗ್ಸ್ಟೋನ್ 0, 13 , 43, 9 ರನ್ ಗಳಿಸಿ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನೂ ಈ ಬಾರಿ ಮೆಗಾ ಹರಾಜಿನಲ್ಲಿ ಕುತೂಹಲ ಮೂಡಿಸಿದ್ದ ಜೇಕಬ್ ಬೆಥೆಲ್ರನ್ನ ಆರ್ಸಿಬಿ ತಂಡ ಖರೀದಿ ಮಾಡಿತ್ತು. ಅವರು ಕೂಡ ಈ ಸರಣಿಯಲ್ಲಿ ಠುಸ್ ಪಟಾಕಿಯಾಗಿದ್ದಾರೆ. ಆಡಿದ 2 ಪಂದ್ಯದಲ್ಲೂ ಸಹ 7, 6 ಗಳಿಸಿ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಮೂವರು ಆಟಗಾರರನ್ನ ಆರ್ಸಿಬಿ ಪೈಪೋಟಿಗೆ ಬಿದ್ದು ಖರೀದಿ ಮಾಡಿತ್ತು. ಆದರೆ ಇವರ ಪ್ರದರ್ಶನ ಆರ್ಸಿಬಿಗೆ ದೊಡ್ಡ ತಲೆನೋವು ಉಂಟು ಮಾಡಿದೆ…
