
ಐಪಿಎಲ್ 2025ರ ಟೂರ್ನಿಗೆ ಕೆಲ ದಿನಗಳು ಮಾತ್ರ ಬಾಕಿ ಉಳಿದಿವೆ. ಬಹುತೇಕವಾಗಿ ಎಲ್ಲ ತಂಡಗಳು ತಮ್ಮ ನಾಯಕನನ್ನು ಪ್ರಕಟಿಸಿವೆ. ಆದರೆ ಕೆಕೆಆರ್ , ಆರ್ಸಿಬಿ ಸೇರಿದಂತೆ ಕೆಲ ತಂಡಗಳು ನಾಯಕನ ಹೆಸರು ಅಂತಿಮಗೊಳಿಸಿಲ್ಲ. ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ ಅವರನ್ನೇ ನಾಯಕರನ್ನಾಗಿ ಮಾಡಬೇಕೆಂಬ ಚರ್ಚೆ ನಡೆಯುತ್ತಿದೆ.

ಈ ಸಲುವಾಗಿ ಮ್ಯಾನೇಜ್ಮೆಂಟ್ ಕೂಡ ಕೊಹ್ಲಿಯ ಜೊತೆ ಮಾತುಕತೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಕೊಹ್ಲಿ ನಾಯಕರಾಗುತ್ತಾರೆ ಎಂಬ ಲೆಕ್ಕಚಾರದಲ್ಲಿ ಆರ್ಸಿಬಿ ಐಪಿಎಲ್ ಹರಾಜಿನಲ್ಲಿ ನಾಯಕ ಆಟಗಾರನ್ನ ಖರೀದಿಸಲು ಹೋಗಲಿಲ್ಲ. ಹೀಗಾಗಿ ಅಭಿಮಾನಿಗಳು ಸಹ ಈ ಸೀಸನ್ಗೆ ವಿರಾಟ್ ಕೊಹ್ಲಿ ಅವರೇ ನಾಯಕರಾಗುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಆರ್ಸಿಬಿ ಈ ಬಾರಿ ಹರಾಜಿನಲ್ಲಿ ಬ್ಯಾಲೆನ್ಸ್ ಟೀಂ ಕಟ್ಟಿದೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ವಿರಾಟ್ ಕೊಹ್ಲಿ, ರಜತ್ ಪಟೀದಾರ್,ದೇವದತ ಪಡಿಕ್ಕಲ್,ಭುವನೇಶ್ವರ್ ಕುಮಾರ್, ಯಶ್ ದಯಾಳ್,ಕೃಣಾಲ್ ಪಾಂಡ್ಯ, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್ಸ್ಟೋನ್, ಫಿಲ್ ಸಾಲ್ಟ್, ಜೋಶ್ ಹೇಜಲ್ವುಡ್ರಂತಹ ಆಟಗಾರರು ಆರ್ಸಿಬಿ ತಂಡದಲ್ಲಿದ್ದಾರೆ.

ಅಭಿಷೇಕ್ . ಎಸ್