Ashwaveega News 24×7 ಮಾರ್ಚ್ 21 – 2026 : ಬೆಂಗಳೂರು : ಐಪಿಎಲ್ ಅಭಿಮಾನಿಗಳಿಗೆ ಉಲ್ಲಾಸದ ಸುದ್ದಿ. Royal Challengers Bangalore ತಮ್ಮ 2026 ಐಪಿಎಲ್ ಪಂದ್ಯಗಳ ಟಿಕೆಟ್ ಮಾರಾಟಕ್ಕೆ ಸಿದ್ಧವಾಗಿದೆ. ಇನ್ನು ಎರಡು ದಿನಗಳಲ್ಲಿ ಅಭಿಮಾನಿಗಳು ಅಧಿಕೃತವಾಗಿ ಟಿಕೆಟ್ಗಳನ್ನು ಖರೀದಿಸಬಹುದಾಗಿದೆ .
ಟಿಕೆಟ್ಗಳು RCB ವೆಬ್ಸೈಟ್ ಮತ್ತು ಆ್ಯಪ್ ಮೂಲಕ ಮಾತ್ರ ಲಭ್ಯವಿದ್ದು, ಮೂರನೇ ವ್ಯಕ್ತಿ ಅಥವಾ ಬೇರೆ ಆ್ಯಪ್ಗಳಿಂದ ಖರೀದಿಸಲು ಅವಕಾಶ ಇಲ್ಲ .
ಹೆಸರಿನಂತೆ ಮೊದಲ ಪಂದ್ಯ RCB ಮತ್ತು Sunrisers Hyderabad ನಡುವೆ ನಡೆಯಲಿದೆ. ಪಂದ್ಯ ಬೆಂಗಳೂರು ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ . ಮೈದಾನ ಪ್ರವೇಶಕ್ಕಾಗಿ ಲಿಂಕ್ ರಸ್ತೆ ಮತ್ತು ಕಬ್ಬನ್ ರಸ್ತೆಯಿಂದ ಎಂಟ್ರಿ ನೀಡಲಾಗುತ್ತದೆ .
RCB ಟಿಕೆಟ್ ಹೊಂದಿರುವ ಅಭಿಮಾನಿಗಳಿಗೆ ಉಚಿತ ಮೆಟ್ರೋ ಪ್ರಯಾಣ ನೀಡಲಾಗುತ್ತದೆ. ಸ್ಟೇಡಿಯಂ ಪಾರ್ಕಿಂಗ್ಗಾಗಿ ಗರುಡಮಾಲ್, ಸೇಂಟ್ ಜೋಸೆಫ್ ಬಾಯ್ಸ್ ಹೈಸ್ಕೂಲ್, ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ಫ್ರೀಡಮ್ ಪಾರ್ಕ್ ಪ್ರದೇಶಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಸ್ಥಳಗಳಿಗಾಗಿ ಮೊದಲೇ ಬುಕ್ಕಿಂಗ್ ಮಾಡುವುದು ಕಡ್ಡಾಯ .
ಆರ್ಸಿಬಿ ತಂಡ ಕಾಲ್ತುಳಿತದಿಂದ ಎಚ್ಚೆತವಾಗಿ ಟಿಕೆಟ್ ನಿಯಮಗಳನ್ನು ಜಾರಿಗೆ ತಂದಿದ್ದು, ಪ್ರವೇಶಕ್ಕಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸುವಂತೆ ಅಭಿಮಾನಿಗಳಿಗೆ ಸೂಚಿಸಲಾಗಿದೆ .
