Ashwaveega News 24×7 ಏಪ್ರಿಲ್ 4– 2026 : ಬೆಂಗಳೂರು : Royal Challengers Bengaluru ತಂಡದ ಮ್ಯಾನೇಜ್ಮೆಂಟ್ ವಿರುದ್ಧ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. RCB vs CSK IPL Match ಪಂದ್ಯಕ್ಕೆ ಟಿಕೆಟ್ ಸಿಗದೇ ಫ್ಯಾನ್ಸ್ ಪರದಾಟ ನಡೆಸುತ್ತಿದ್ದಾರೆ.
ಆನ್ಲೈನ್ನಲ್ಲಿ ಮಾತ್ರ ಟಿಕೆಟ್ ಮಾರಾಟ ಮಾಡುತ್ತಿರುವ RCB ನಿರ್ಧಾರಕ್ಕೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಖರೀದಿಸಲು BookMyShowಗೆ ಹೋಗಿದ್ರೆ “ಸೀಟ್ ಬುಕ್ಡ್” ಎಂದು ತೋರಿಸುತ್ತಿದೆ. ಆದರೆ ಬೇರೆ ತಂಡಗಳ ಪಂದ್ಯಗಳ ಟಿಕೆಟ್ ಸುಲಭವಾಗಿ ಸಿಗುತ್ತಿವೆ ಎಂಬ ಆರೋಪವೂ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ “RCB ಪಂದ್ಯಕ್ಕೆ ಮಾತ್ರ ಟಿಕೆಟ್ ಸಿಗುತ್ತಿಲ್ಲ” ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ. ಆನ್ಲೈನ್ ವ್ಯವಸ್ಥೆಯಿಗಿಂತ ಮೊದಲು ಇದ್ದ ಆಫ್ಲೈನ್ ಟಿಕೆಟ್ ವ್ಯವಸ್ಥೆಯೇ ಉತ್ತಮವಾಗಿತ್ತು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸುಮಾರು 35 ಸಾವಿರ ಆಸನಗಳಷ್ಟೇ ಇರುವುದರಿಂದ ಬೇಡಿಕೆ ಹೆಚ್ಚಾಗಿದೆ. ಆದರೆ ಎಲ್ಲಾ ಟಿಕೆಟ್ಗಳನ್ನು ಏಜೆಂಟ್ಗಳಿಗೆ ಮಾರಲಾಗುತ್ತಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಇದಕ್ಕೂ ನಡುವೆ ಟಿಕೆಟ್ ಹೆಸರಿನಲ್ಲಿ ವಂಚನೆ ಪ್ರಕರಣಗಳೂ ಬೆಳಕಿಗೆ ಬಂದಿವೆ. ಆನ್ಲೈನ್ನಲ್ಲಿ ಟಿಕೆಟ್ ಖರೀದಿಸಲು ಹೋಗಿದ ಅಭಿಮಾನಿಯೊಬ್ಬರು ಪೇಮೆಂಟ್ ಮಾಡಿದರೂ, “ಟ್ರಾನ್ಸಾಕ್ಷನ್ ಫೇಲ್” ಎಂದು ತೋರಿಸಿ ಹಣ ಮಾತ್ರ ವಾಪಸ್ ಬರಲಿಲ್ಲ ಎಂದು ಆರೋಪಿಸಿದ್ದಾರೆ .
ಈ ಘಟನೆಗಳ ಹಿನ್ನೆಲೆದಲ್ಲಿ, ಟಿಕೆಟ್ ಮಾರಾಟದಲ್ಲಿ ಪಾರದರ್ಶಕತೆ ತರಬೇಕು ಹಾಗೂ ವಂಚನೆ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಭಿಮಾನಿಗಳು ಪೊಲೀಸರಿಗೆ ಮನವಿ ಮಾಡಿದ್ದಾರೆ .
