ಬೆಂಗಳೂರು : Royal Challengers Bengaluru (RCB) ತಂಡದ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು M. Chinnaswamy Stadiumನಲ್ಲಿ ವ್ಯಾಪಕ ಭದ್ರತಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮಾ. 28ರಂದು ನಡೆಯಲಿರುವ Indian Premier League ಉದ್ಘಾಟನಾ ಪಂದ್ಯಕ್ಕೆ ನಗರ ಸಜ್ಜಾಗಿದೆ.
ಇತ್ತೀಚೆಗೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ 11 ಮಂದಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಸ್ಟೇಡಿಯಂನಲ್ಲಿ 11 ಖಾಲಿ ಕುರ್ಚಿಗಳನ್ನು ಬಿಡಲು RCB ನಿರ್ಧರಿಸಿದೆ. ಇದೇ ವೇಳೆ ಆ 11 ಟಿಕೆಟ್ಗಳನ್ನು ಮಾರಾಟ ಮಾಡದೇ ಗೌರವಾರ್ಪಣೆ ಸಲ್ಲಿಸಲಾಗುತ್ತದೆ.
ಪಂದ್ಯದ ಟಿಕೆಟ್ಗಳನ್ನು ಇಂದು ಸಂಜೆದಿಂದಲೇ ಆನ್ಲೈನ್ ಮೂಲಕ ಮಾರಾಟಕ್ಕೆ ಇಡಲಾಗಿದೆ. ಅಭಿಮಾನಿಗಳ ಭಾರೀ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಲಾಗಿದೆ.
ಸ್ಟೇಡಿಯಂನಲ್ಲಿ ಒಟ್ಟು 350 ಎಐ ಆಧಾರಿತ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಭದ್ರತೆಗಾಗಿ ಎರಡು ಕಂಟ್ರೋಲ್ ಸೆಂಟರ್ಗಳನ್ನು ತೆರೆಯಲಾಗಿದೆ. ಅಲ್ಲದೆ, ಪೊಲೀಸ್ ಕಮಿಷನರ್ ಕಚೇರಿಯಲ್ಲೂ ನೇರವಾಗಿ ಸಿಸಿಟಿವಿ ದೃಶ್ಯಗಳನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.
ಕಾಲ್ತುಳಿತ ಘಟನೆ ಬಳಿಕ ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಹೆಚ್ಚಿನ ನಿಗಾವಹಿಸಿದ್ದಾರೆ.
