ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಿನ್ನೆ ಶಾಸಕ ಯತ್ನಾಳ್ ಮಾತ್ರ ದೆಹಲಿಯಲ್ಲಿ ಕಾಣಿಸಿದರು. ಇವತ್ತು ಅವರೊಂದಿಗೆ ವಕ್ಫ್ ವಿರುದ್ಧ ಹೋರಾಟ ನಡೆಸಿದ ಅವರ ಸಂಗಡಿಗ ಬಿಜೆಪಿ ಮುಖಂಡರು ಜೊತೆಗೂಡಿದ್ದಾರೆ.
ದೆಹಲಿಯಲ್ಲಿನ ಕರ್ನಾಟಕ ಭವನದಲ್ಲಿ ಶಾಸಕ ಯತ್ನಾಳ್ ಬಣದ ನಾಯಕರು ಚರ್ಚೆ ನಡೆಸಿದ್ದಾರೆ . ಚರ್ಚೆಯಲ್ಲಿ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.