Ashwaveega News 24×7 ಮಾರ್ಚ್ 21 – 2026 : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ಕಾಂಗ್ರೆಸ್ ಒಳಗಲ್ಲಿ ತೀವ್ರ ಚರ್ಚೆ ಹಾಗೂ ವಾಗ್ವಾದಕ್ಕೆ ಕಾರಣವಾಗಿದೆ. ಸಚಿವ Zameer Ahmed Khan ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ ಮುಂದೆ ತೀವ್ರ ಒತ್ತಾಯ ಮಾಡಿದ್ದಾರೆ.
“ಈ ಬಾರಿ ನಮ್ಮ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು. ಇಲ್ಲದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ” ಎಂದು ಜಮೀರ್ ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ. “ನಮ್ಮವರಿಗೆ ಟಿಕೆಟ್ ಕೊಡಿಸಿ” ಎಂಬ ಒತ್ತಾಯ ಹೆಚ್ಚಾಗಿದೆ …
ಈ ವೇಳೆ ಕಾಂಗ್ರೆಸ್ ಉಸ್ತುವಾರಿ Randeep Singh Surjewala ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. “ಧರ್ಮಗುರುಗಳನ್ನು ರಾಜಕೀಯಕ್ಕೆ ಎಳೆದು ತರುವುದು ಸರಿಯಲ್ಲ. ಟಿಕೆಟ್ ನೀಡುವುದು ಪಕ್ಷದ ನಿರ್ಧಾರ. ಗೆಲ್ಲುವ ಅಭ್ಯರ್ಥಿಗೆ ಮಾತ್ರ ಅವಕಾಶ ಸಿಗುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಮುಂದೆ ಮಾತನಾಡಿದ ಸುರ್ಜೇವಾಲಾ, “ಬೇಕಿದ್ದರೆ ನೀವು ರಾಜೀನಾಮೆ ಕೊಡಬಹುದು” ಎಂದು ನೇರವಾಗಿ ಕೌಂಟರ್ ನೀಡಿದ್ದಾರೆ. ಈ ಖಡಕ್ ನಿಲುವಿನಿಂದ ಜಮೀರ್ ಅಹ್ಮದ್ ಸ್ವಲ್ಪ ಮೆತ್ತಗಾದರು ಎನ್ನಲಾಗುತ್ತಿದೆ.
ಈ ಬೆಳವಣಿಗೆಗಳ ನಡುವೆ ದಾವಣಗೆರೆ ದಕ್ಷಿಣ ಟಿಕೆಟ್ಗಾಗಿ ಸ್ಪರ್ಧೆಯಲ್ಲಿರುವ ಸಮರ್ಥ್ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ .
