Ashwaveega News 24×7 ಏಪ್ರಿಲ್ 5 – 2026 : ಬೆಂಗಳೂರು : ಐಪಿಎಲ್ ಕಣದಲ್ಲಿನ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ Royal Challengers Bengaluru ಮತ್ತು Chennai Super Kings ಅಭಿಮಾನಿಗಳ ನಡುವೆ ವಾಕ್ ಸಮರ ಜೋರಾಗಿದೆ. ಇಂದು ಬೆಂಗಳೂರಿನಲ್ಲಿ ನಡೆಯಲಿರುವ ಈ ಮೆಗಾ ಫೈಟ್ಗೆ ಮುನ್ನವೇ ನಗರದಲ್ಲಿ ಕ್ರಿಕೆಟ್ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
CSK ಅಭಿಮಾನಿಗಳು ತಮ್ಮ ತಂಡದ ಮೇಲೆ ಭಾರೀ ವಿಶ್ವಾಸ ವ್ಯಕ್ತಪಡಿಸುತ್ತಿದ್ದು, “ಇಂದಿನ ಪಂದ್ಯದಲ್ಲಿ ಗೆಲುವು ನಮ್ಮದೇ. ನಮ್ಮ ತಂಡಕ್ಕೆ MS Dhoni ಅವರ ಆಶೀರ್ವಾದ ಇದೆ” ಎಂದು ಹೇಳಿದ್ದಾರೆ. ಅಲ್ಲದೇ, “RCB ಫ್ಯಾನ್ಸ್ಗಳದ್ದು ಬರೀ ಡೈಲಾಗ್ಸ್ ಮಾತ್ರ” ಎಂದು ಟಾಂಗ್ ನೀಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿದ RCB ಅಭಿಮಾನಿಗಳು, “ಈ ಬಾರಿ ಮೈದಾನದಲ್ಲೇ ಗೆದ್ದು ತೋರಿಸುತ್ತೇವೆ. ಮಾತಲ್ಲ, ಆಟದಲ್ಲಿ ಉತ್ತರ ಕೊಡ್ತೀವಿ” ಎಂದು ಸವಾಲು ಹಾಕಿದ್ದಾರೆ. “ಬೊಗುಳೋ ನಾಯಿ ಕಚ್ಚಲ್ಲ… ಕಚೋ ನಾಯಿ ಬೊಗಳಲ್ಲ… ಇವತ್ತು ಗೆಲುವು ನಮ್ದೇ!” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಹಲವು ಕಡೆಗಳಲ್ಲಿ ಫ್ಯಾನ್ಸ್ಗಳು ತಂಡದ ಜೆರ್ಸಿ ಧರಿಸಿ, ಬ್ಯಾನರ್ಗಳು ಹಿಡಿದು ತಮ್ಮ ತಮ್ಮ ತಂಡಕ್ಕೆ ಚಿಯರ್ ಮಾಡುತ್ತಿದ್ದು, ಪಂದ್ಯಕ್ಕೂ ಮುನ್ನವೇ ರಂಗೇರಿದ ವಾತಾವರಣ ಕಂಡುಬರುತ್ತಿದೆ.
