
ಐಪಿಎಲ್ ಸೀಸನ್ 18ಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಆರ್ಸಿಬಿ ಬಲಿಷ್ಟ ಡಿಫೆಂಡಿಗ್ ಚಾಂಪಿಯನ್ ಕೆಕೆಆರ್ ತಂಡವನ್ನು ಎದುರಿಸಲಿದೆ. ಟೂರ್ನಿ ಹತ್ತಿವಾಗುತ್ತಿದ್ದಂತೆ ಆರ್ಸಿಬಿಗೆ ಟೆನ್ಷನ್ ಕೂಡ ಹೆಚ್ಚಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಇಂಗ್ಲೆಂಡ್ ತಂಡ ಫೀಲ್ ಸಾಲ್ಟ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ಬ್ಯಾಟಿಂಗ್. ಆರ್ಸಿಬಿ ಇವರಿಬ್ಬರ ಮೇಲೆ ನಿರೀಕ್ಷೆಯಿಟ್ಟು ಮೆಗಾ ಹರಾಜಿನಲ್ಲಿ ಪೈಪೋಟಿಗಿಳಿದು ಖರೀದಿ ಮಾಡಿತ್ತು. ಆದರೆ ಇವರಿಬ್ಬರ ಇತ್ತೀಚಿನ ಪ್ರದರ್ಶನ ತೀರಾ ಕಳಪೆಯಾಗಿದೆ. ಸಾಲ್ಟ್ ಎಂದಿನಂತೆ ತಮ್ಮ ಶೈಲಿಯಲ್ಲಿ ಬ್ಯಾಟ್ ಬೀಸುತ್ತಿಲ್ಲ, ಲಿಯಾಮ್ ಲಿವಿಂಗ್ಸ್ಟೋನ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡುತ್ತಿಲ್ಲ. ಇಬ್ಬರು ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಇಂಗ್ಲೆಂಡ್ ತಂಡದ ಮೇಲೂ ಪರಿಣಾಮ ಬೀರಿದೆ. ಪ್ರಸ್ತುತ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಬ್ಬರು ಕೂಡ ಒಂದೇ ಒಂದು ಅರ್ಧಶತಕ ಸಿಡಿಸಿಲ್ಲ. ಹೀಗಾಗಿ ಬ್ಯಾಟಿಂಗ್ನಲೇ ಇವರಿಬ್ಬರನ್ನು ಪ್ರಮುಖ ಬ್ಯಾಟರ್ಗಳನ್ನಾಗಿ ತೆಗೆದುಕೊಂಡಿರುವ ಬೆಂಗಳೂರು ಫ್ರಾಂಚೈಸಿಗೆ ದೊಡ್ಡ ತಲೆನೋವು ಎದುರಾಗಿದೆ..

ಅಭಿಷೇಕ್. ಎಸ್