Ashwaveega News 24×7 ಮಾರ್ಚ್ 09 – 2026 : ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿ ವಿಚಾರದಲ್ಲಿ ಗೊಂದಲ ಮುಂದುವರಿಯುತ್ತಿದೆ. ಗುರ್ಮಿಟ್ಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಬುಧವಾರ ಚುನಾವಣಾ ಮೈತ್ರಿಯ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಶರಣಗೌಡ ತಮ್ಮ ಹೇಳಿಕೆಯಲ್ಲಿ, “ನಾವು ಬಿಜೆಪಿಯನ್ನು ಪ್ರೀತಿಸುತ್ತೇವೆ, ಆದರೆ ಅವರು ನಮ್ಮನ್ನು ಪ್ರೀತಿಸುವುದಿಲ್ಲ. ಲೋಕಸಭಾ ಚುನಾವಣೆಗಳಲ್ಲಿ ಮೈತ್ರಿಯಿಂದ 19 ಸ್ಥಾನಗಳನ್ನು ಗೆದ್ದಿದ್ದೇವೆ. ಅಧಿವೇಶನ ಸಮಯದಲ್ಲಿ ಸಮನ್ವಯ ಸಭೆಗಳನ್ನು ನಡೆಸುತ್ತಿದ್ದೆವು. ಆದರೆ ನಿನ್ನೆ, ಸಮನ್ವಯ ಸಭೆ ನಡೆಸುವ ಬಗ್ಗೆ ಬಿಜೆಪಿ ದಿಂದ ಮಾಹಿತಿ ಬಂದಿಲ್ಲ. ಪ್ರತಿಭಟನೆಗೆ ತೆರಳುವ ಕೇವಲ 30 ನಿಮಿಷಗಳ ಮೊದಲು ನಮಗೆ ತಿಳಿಸಿದ್ದರು ಹೇಳಿದ್ದಾರೆ.
ಅವರು ಮುಂದಾಗುವಂತೆ, “ರಾಜ್ಯದ ಜನರು ಕುಮಾರಸ್ವಾಮಿ ಸಿಎಂ ಆಗಬೇಕೆಂದು ಬಯಸುತ್ತಿದ್ದಾರೆ. ದೋಸ್ತಿ ಇರಲಿ ಇಲ್ಲವಲ್ಲ, ನಮಗೆ ಕುಮಾರಸ್ವಾಮಿ ಸಿಎಂ ಅಭ್ಯರ್ಥಿ. ಬಿಜೆಪಿಯವರು ಸಿಎಂ ಅಭ್ಯರ್ಥಿ ಯಾರೆಂದು ಹೇಳಲಿ ನೋಡೋಣ,” ಎಂದಿದ್ದಾರೆ.
ಶರಣಗೌಡ ಹೇಳಿಕೆಯಿಂದ ರಾಜ್ಯದ ಜೆಡಿಎಸ್–ಬಿಜೆಪಿ ಮೈತ್ರಿ ಸಂಬಂಧವು ಹೇಗೆ ಸಾಗಲಿದೆ ಎಂಬ ಬಗ್ಗೆ ಪ್ರಶ್ನೆ ಉದ್ಭವಿಸಿದೆ. ಅನೇಕ ರಾಜಕಾರಣ ವೀಕ್ಷಕರಿಗೆ, ಮೈತ್ರಿ ಪಕ್ಷಗಳಿಗೆ 140–150 ಸ್ಥಾನಗಳನ್ನು ಗೆಲ್ಲಲು, ಕುಮಾರಸ್ವಾಮಿ ಅವರನ್ನು NDAಯಿಂದ ಮುಖ್ಯಮಂತ್ರಿಯಾಗಿ ಘೋಷಿಸುವುದು ಅತ್ಯಗತ್ಯ ಎಂದು ಅನಿಸುತ್ತದೆ.
