Ashwaveega News 24×7 ಫೆಬ್ರವರಿ 09 -2026 – ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಾಯಿ–ಮಗಳ ಸಂಬಂಧವನ್ನೇ ಪ್ರಶ್ನಿಸುವಂತಹ ವಿಚಿತ್ರ ಹಾಗೂ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಹೆತ್ತು ಸಾಕಿದ ತಾಯಿಗೆ ಯಾರಾದ್ರೂ ಹೀಗೆ ಮಾಡ್ತಾರಾ ? ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿಸಿದೆ.
23 ವರ್ಷದ ಯುವತಿ ತನ್ನ ತಾಯಿ ಹಾಗೂ ಸಂಬಂಧಿಯ ಖಾಸಗಿ ಫೋಟೋಗಳನ್ನು ತೆಗೆದು, ತನ್ನ ಪ್ರಿಯಕರನಿಗೆ ಕಳಿಸಿದ್ದ ಆರೋಪ ಕೇಳಿಬಂದಿದೆ. ಈ ಕೃತ್ಯ ಬೆಳಕಿಗೆ ಬಂದ ಬಳಿಕ ಜನರು ಛೀ.. ಥೂ ಎನ್ನುವಂತ ಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚೆಗೆ ಯುವತಿ ಪೋಷಕರಿಂದ ಮೊಬೈಲ್ ಪಡೆದಿದ್ದಳು. ಯುವಕನ ಜೊತೆ ನಿರಂತರವಾಗಿ ಮಾತನಾಡುತ್ತಿದ್ದ ಕಾರಣ ಪೋಷಕರು ಮೊಬೈಲ್ ವಾಪಸ್ ಪಡೆದಿದ್ದಾರೆ. ಆದರೆ ಯುವತಿ ಮೊಬೈಲ್ ಪಾಸ್ವರ್ಡ್ ನೀಡಲು ನಿರಾಕರಿಸಿದ್ದಳು .
ಈ ನಡುವೆ, ಗಂಡನ ಮೂಲಕ ಮೊಬೈಲ್ ಪಾಸ್ವರ್ಡ್ ಪಡೆದು ಪರಿಶೀಲನೆ ನಡೆಸಿದ ತಾಯಿಗೆ ಬಿಗ್ ಶಾಕ್ ಎದುರಾಗಿದೆ. ಮೊಬೈಲ್ ಪರಿಶೀಲನೆ ವೇಳೆ ಮಗಳ ಕೃತ್ಯ ಬಯಲಾಗಿದ್ದು, ತಾಯಿ ಹಾಗೂ ಸಂಬಂಧಿಯ ಖಾಸಗಿ ಫೋಟೋಗಳನ್ನು ತೆಗೆದಿದ್ದಲ್ಲದೇ, ಅವುಗಳನ್ನು ಪ್ರಿಯಕರನಿಗೆ ಕಳಿಸಿದ್ದಾಳೆ ಎಂಬ ಆರೋಪ ದೃಢವಾಗಿದೆ.
ಈ ಬಗ್ಗೆ ಪ್ರಶ್ನಿಸಿದಾಗ, “ಅವನನ್ನೇ ಮದುವೆಯಾಗುತ್ತೇನೆ” ಎಂದು ಯುವತಿ ಹಠ ತಳೆದಿದ್ದಾಳೆ . ಸದ್ಯ ಪೋಷಕರು ಮಗಳಿಗೆ ಬುದ್ಧಿ ಹೇಳಿ, ಫೋಟೋಗಳನ್ನು ಡಿಲಿಟ್ ಮಾಡಿಸಿದ್ದಾರೆ.
ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಮಗಳು ಹಾಗೂ ಆಕೆಯ ಪ್ರಿಯಕರನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕುಟುಂಬದ ಒಳಗೇ ನಂಬಿಕೆಗೆ ಧಕ್ಕೆ ತರುವಂತಹ ಈ ಪ್ರಕರಣ, ಮೊಬೈಲ್ ಬಳಕೆ ಹಾಗೂ ಯುವಜನರ ವರ್ತನೆ ಕುರಿತಾಗಿ ಗಂಭೀರ ಚರ್ಚೆಗೆ ಕಾರಣವಾಗಿದೆ.
