Ashwaveega News 24×7 ಫೆಬ್ರವರಿ 10 -2026 – ಹಾವೇರಿ: ರಾಜ್ಯ ಸರ್ಕಾರದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಎಂಬ ಘೋಷಣೆಗಳಿಗೆ ನೆಲಮಟ್ಟದ ವಾಸ್ತವ ಸಂಪೂರ್ಣ ಭಿನ್ನವಾಗಿದೆ. ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಸ್ಥಿತಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ ನೋಡಲೇಬೇಕಾದ ಕಥೆಯಾಗಿ ಪರಿಣಮಿಸಿದೆ.
ಹೊರಗೆ ನೋಡಿದರೆ ಸರ್ಕಾರಿ ಶಾಲೆ ಅಂದವಾಗಿ ಕಾಣಿಸಿದರೂ, ಒಳಗೆ ಕಾಲಿಟ್ಟರೆ ಎಲ್ಲೆಡೆ ಕೊಳಕು ಮತ್ತು ಅವ್ಯವಸ್ಥೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಸುಮಾರು 730 ವಿದ್ಯಾರ್ಥಿಗಳು ಕಲಿಯುತ್ತಿರುವ ಈ ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಶಾಲೆಯಲ್ಲಿ ಒಂದೇ ಒಂದು ಶೌಚಾಲಯ ಇದ್ದು, ಅದು ಕೂಡ ಸಂಪೂರ್ಣ ಹಾಳಾಗಿರುವುದರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಕ್ಕಳಿಗೆ ಅಗತ್ಯವಾದ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ, ಪಾಠಶಾಲೆಯೊಳಗೆ ಡೆಸ್ಕ್ಗಳ ಕೊರತೆ ತೀವ್ರವಾಗಿದ್ದು, ಅನೇಕ ಮಕ್ಕಳು ನೆಲದ ಮೇಲೆಯೇ ಕುಳಿತು ಪಾಠ ಕೇಳುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.
ಈ ರೀತಿ ಶಾಲೆ ನಡೆಸೋದಾದ್ರೆ ಶಿಕ್ಷಕರು ಏಕೆ ಬೇಕು ? ಈ ಕುರಿತಾಗಿ ತಕ್ಷಣವೇ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಶಾಲೆಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂಬುದು ಸಾರ್ವಜನಿಕರ ತೀವ್ರ ಆಗ್ರಹವಾಗಿದೆ.
