ಬೆಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ಧ ಸುಳ್ಳು ಆಪಾದನೆಗಳನ್ನು ಮಾಡುತ್ತಿದ್ದಾರೆ. ಪರಿಶಿಷ್ಟ ಪಂಗಡಗಳ ಸಮುದಾಯ ಸಿಎಂ ಸಿದ್ದರಾಮಯ್ಯ ಪರ ನಿಲ್ಲಬೇಕು ಎಂದು ಸಚಿವ ಕೆಎನ್ ರಾಜಣ್ಣ ಸಮುದಾಯದ ಜನರಿಗೆ ಕರೆ ನೀಡಿದ್ದಾರೆ.
ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಕೆಎನ್ ರಾಜಣ್ಣ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದು, 2014-15ರಲ್ಲಿ ಆಂಧ್ರಪ್ರದೇಶ ಹೊರತುಪಡಿಸಿ ನಮ್ಮ ರಾಜ್ಯದಲ್ಲಿ ಮಾತ್ರ SCSP-TSP ಕಾಯ್ದೆ ಜಾರಿ ಮಾಡಿದ ಕೀರ್ತಿ ಸಿದ್ದರಾಮಯ್ಯ ಮತ್ತು ಆಂಜನೇಯಗೆ ಮಾತ್ರ ಸಲ್ಲಬೇಕು. ಅಲ್ಲಿಂದ ಇಲ್ಲಿಯವರೆಗೆ 86 ಸಾವಿರ ಕೋಟಿ ಹಣ ಈ ಸಮುದಾಯದ ಜನರಿಗೆ ಅಭಿವೃದ್ಧಿಗೆ ಮೀಸಲು ಇರಿಸಲಾಗಿದೆ. ನಾವು ಸಿದ್ದರಾಮಯ್ಯಗೆ ಋಣಿಯಾಗಿ ಇರಬೇಕು. ಅವರಿಗೆ ಬೆಂಬಲ ಕೊಡಬೇಕು ಎಂದು ಹೇಳಿದ್ದಾರೆ.
ಇನ್ನೂ ಇದೆ ವೇಳೆ ಸಿದ್ದರಾಮಯ್ಯ ಮೇಲೆ ಸುಳ್ಳು ಆಪಾದನೆ ತಂದಿದ್ದಾರೆ. ನಾವು ಸಿದ್ದರಾಮಯ್ಯ ಪರ ನಿಲ್ಲಬೇಕು. ಬಡವರ ಪರ ಕೆಲಸ ಮಾಡೋ ನಾಯಕನಿಗೆ ಅಪವಾದ ತರುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮೇಲೆ ಅಪವಾದ ತರುವವರಿಗೆ ಮುಂದಿನ ದಿನಗಳಲ್ಲಿ ನಾವು ಪಾಠ ಕಲಿಸಬೇಕು ಎಂದು ಸಚಿವ ಕೆಎನ್ ರಾಜಣ್ಣ ಕರೆ ಕೊಟ್ಟಿದ್ದಾರೆ.
ಇದನ್ನೂ ಓದಿ : https://ashwaveega.com/dharwad-national-highway-washed-away-due-to-continuous-rain/