ashwaveega news 24×7 ಮಾರ್ಚ್26.2026: ಆರೋಗ್ಯಕರ ಆಹಾರ ಕ್ರಮದಲ್ಲಿ ಹಣ್ಣುಗಳು ತುಂಬಾನೇ ಮುಖ್ಯ. ಮಾನವನ ಆರೋಗ್ಯವನ್ನು ಕಾಪಾಡುವಲ್ಲಿ ಹಣ್ಣುಗಳು ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲೂ ಸೀಸನ್ಗೆ ತಕ್ಕಂತೆ ಹಣ್ಣುಗಳ ಸೇವನೆ ಮಾಡಿದರೆ ಯಾವುದೇ ರೋಗಗಳಾಗಲಿ ನಮ್ಮ ಬಳಿ ಸುಳಿಯುವುದೇ ಇಲ್ಲ. ಹಣ್ಣುಗಳಲ್ಲಿ ಸೇಬಿಗೆ ತುಂಬಾ ಪ್ರಾಮುಖ್ಯತೆ ಇದೆ. ಈ ಹಣ್ಣನ್ನು ಆರೋಗ್ಯದ ಕಣಜ ಎಂದೇ ಕರೆಯಲಾಗುತ್ತದ

ಸೇಬು ಬಣ್ಣ ಬದಲಾಗುತ್ತಾ?
ಬೇಸಿಗೆ ಕಾಲವಾದ್ದರಿಂದ ಹೆಚ್ಚಿನ ಜನರು ತಮ್ಮ ಆಹಾರದಲ್ಲಿ ಬಹಳಷ್ಟು ಹಣ್ಣುಗಳನ್ನು ಸೇರಿಸಿಕೊಳ್ಳುತ್ತಾರೆ. ಹೀಗಾಗಿ, ಸೇಬಿಗೆ ಈಗ ಹೆಚ್ಚಿನ ಬೇಡಿಕೆಯಿದೆ. ನೀವು ಗಮನಿಸಿರಬಹುದು ಕತ್ತರಿಸಿದ ನಂತರ ಸೇಬಿನ ಬಣ್ಣ ಬದಲಾಗುತ್ತದೆ. ಇದು ಸಾಮಾನ್ಯವಾಗಿ ಕಂಡುಬರುವ ದೃಶ್ಯವಾಗಿದೆ. ಬಿಳಿ ಬಣ್ಣದಲ್ಲಿರುವ ಹಣ್ಣು ಕಂದು ಬಣ್ಣಕ್ಕೆ ತಿರುಗುತ್ತದೆ. ಇದಕ್ಕೆ ಕಾರಣ ಪಾಲಿಫಿನಾಲ್ ಆಕ್ಸಿಡೇಸ್ ಎಂಬ ಕಿಣ್ವ. ಈ ಕಾರಣಕ್ಕಾಗಿ, ಸೇಬು ಹಣ್ಣನ್ನು ಕತ್ತರಿಸಿ ಇಡುವುದಿಲ್ಲ. ಆದರೆ, ಸೇಬು ಹಣ್ಣಿನ ಬಣ್ಣ ಬದಲಾಗದಂತೆ ನೋಡಿಕೊಳ್ಳಲು ಮನೆಯಲ್ಲಿಯೇ ಉತ್ತಮ ಪರಿಹಾರವಿದೆ.
* ಒಂದು ಬಟ್ಟಲು ತಣ್ಣೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ. ಇದರಲ್ಲಿ ಸೇಬಿನ ಚೂರುಗಳನ್ನು ನೆನೆಸುವುದರಿಂದ ಬಣ್ಣ ಬದಲಾಗುವುದನ್ನು ತಡೆಯಬಹುದು.
* ಒಂದು ಲೋಟ ನೀರಿನಲ್ಲಿ ಎರಡು ಚಮಚ ಜೇನುತುಪ್ಪವನ್ನು ಬೆರೆಸಿ ಈ ಮಿಶ್ರಣದಲ್ಲಿ ಸೇಬಿನ ಚೂರುಗಳನ್ನು ನೆನೆಸಿ.
* ಸೇಬಿನ ಚೂರುಗಳನ್ನು ಉಪ್ಪು ನೀರಿನಲ್ಲಿ ನೆನೆಸುವುದರಿಂದ ಬಣ್ಣ ಬದಲಾಗುವುದನ್ನು ತಡೆಯಬಹುದು.
* ಸೇಬಿನ ಚೂರುಗಳನ್ನು ಸ್ವಲ್ಪ ಸಮಯದವರೆಗೆ ವಿನೆಗರ್ ನೀರಿನಲ್ಲಿ ನೆನೆಸಬಹುದು.
* ಕತ್ತರಿಸಿದ ನಂತರ, ನೀವು ಅದನ್ನು ಪ್ಲಾಸ್ಟಿಕ್ ಹೊದಿಕೆ ಅಥವಾ ಫಾಯಿಲ್ನಲ್ಲಿ ಸುತ್ತಿ ಸಂಗ್ರಹಿಸಬಹುದು.
