Ashwaveega News 24×7 ಮಾರ್ಚ್ 11 – 2026 : ಬೆಂಗಳೂರು : ರಾಜ್ಯ ರಾಜಕೀಯದಲ್ಲಿ “ಪವರ್ ಫೈಟ್” ಚರ್ಚೆಗಳು ನಡೆಯುತ್ತಿರುವ ನಡುವೆಯೇ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಸ್ನೇಹ ಮತ್ತೊಮ್ಮೆ ಗಮನಸೆಳೆದಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಆಯೋಜಿಸಿದ್ದ ಡಿನ್ನರ್ ಪಾರ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿ ಆತ್ಮೀಯವಾಗಿ ಸಮಯ ಕಳೆದರು .
ಪಾರ್ಟಿ ವೇಳೆ ಸಂಗೀತದ ನಡುವೆ ಸಿಎಂ ಮತ್ತು ಡಿಸಿಎಂ ಪರಸ್ಪರ ಮಾತುಕತೆ ನಡೆಸಿ, ಹರ್ಷದ ಕ್ಷಣಗಳನ್ನು ಹಂಚಿಕೊಂಡರು. “ನೀನು ಪರಿಮಳ.. ನಾನು ಹೂವು”, “ನೀನು ಗಾನವಾದರೆ.. ನಾನು ದನಿ.. ಎಂದೆಂದೂ ಒಂದಾಗಿ ಬಾಳೋಣವೇ ಈ ಪಯಣದಲಿ” ಎನ್ನುವ ಹಾಡಿನ ಸಾಲುಗಳನ್ನು ಹೇಳುತ್ತಾ ಇಬ್ಬರೂ ಸ್ನೇಹದ ಸಂದೇಶ ನೀಡಿದರು .
ಅಕ್ಕಪಕ್ಕ ಕುಳಿತು ಹಾಡುಗಳನ್ನು ಹಂಚಿಕೊಂಡ ಸಿಎಂ ಮತ್ತು ಡಿಸಿಎಂ, ರಾಜಕೀಯ ಚರ್ಚೆಗಳ ನಡುವೆಯೂ ತಮ್ಮ ಆತ್ಮೀಯತೆಯನ್ನು ಪ್ರದರ್ಶಿಸಿದರು. ಇದೇ ವೇಳೆ ಡಿಕೆ ಜೊತೆಗೆ ಯಾವಾಗಲೂ ಜೊತೆ ಇರುತ್ತೇನೆ ಎಂದು ಸಿಎಂ ಹೇಳಿದ ಮಾತುಗಳು ಕೂಡ ಗಮನಸೆಳೆದವು.
ಡಿನ್ನರ್ ಪಾರ್ಟಿಯಲ್ಲಿ ಸಿಎಂ ತಂಡ ಮತ್ತು ಡಿಸಿಎಂ ತಂಡದ ಹಲವು ಸಚಿವರು ಹಾಗೂ ಶಾಸಕರು ಕೂಡ ಉಪಸ್ಥಿತರಿದ್ದರು. ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಪಾರ್ಟಿಯಲ್ಲಿ ಇದ್ದ ಸಿಎಂ ಮತ್ತು ಡಿಸಿಎಂ ಖುಷಿ ಖುಷಿಯಾಗಿ ಕಾಲ ಕಳೆಯಿದರು.
ಈ ಡಿನ್ನರ್ ಪಾರ್ಟಿ ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
