ಬೆಂಗಳೂರು ಸಿಲಿಕಾನ್ ಸಿಟಿಯಲ್ಲಿಯೇ, ಬಿಬಿಎಂಪಿ ಅನಕ್ಷಮತೆಯಿಂದಾಗಿ ಹಳ್ಳಿಗಳಂತಿರುವ ರಸ್ತೆ ಸ್ಥಿತಿ ನಿರಂತರವಾಗಿ ಮುಂದುವರಿಯುತ್ತಿದೆ. ಕೆಂಗೇರಿ ಮತ್ತು ಉತ್ತರಹಳ್ಳಿ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಬಿಬಿಎಂಪಿ ಅಗೆದು, ಎಷ್ಟೋ ತಿಂಗಳಾಗಿ ಅದೇ ಸ್ಥಿತಿಯಲ್ಲಿ ಬಿಟ್ಟಿದೆ.
ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ಸಾಕಷ್ಟು ಬಾರಿ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರೂ, ಅವರಿಂದ ಯಾವುದೇ ಕ್ರಮ ಕೈಗೊಳ್ಳದೇ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಅಗೆಯಲ್ಪಟ್ಟ ರಸ್ತೆಗೆ ಕೇವಲ ಜಲ್ಲಿ ಕಲ್ಲು ಹಾಕಿ ಹಾಗೆಯೇ ಬಿಟ್ಟಿರುವ ಬಿಬಿಎಂಪಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಅದಷ್ಟು ಬೇಗ ಈ ಧೂಳಿನಿಂದ ನಮಗೆ ಮುಕ್ತಿ ಕೊಡಿಸಬೇಕು,” ಎಂದು ಸ್ಥಳೀಯರು ವಿನಂತಿಸುತ್ತಿದ್ದಾರೆ.