Ashwaveega News 24×7 ಫೆಬ್ರವರಿ 08 -2026 – ವೀಕೆಂಡ್ ದಿನಗಳಲ್ಲೂ ಚಿನ್ನ ಹಾಗೂ ಬೆಳ್ಳಿ ಬೆಲೆಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಸಡನ್ ಜೆರ್ಕ್ ಮಾದರಿಯಲ್ಲಿ ದರಗಳು ಜಿಗಿತ ಕಂಡಿದ್ದು, ಗ್ರಾಹಕರಿಗೂ ವ್ಯಾಪಾರಿಗಳಿಗೂ ಅಚ್ಚರಿ ಮೂಡಿಸಿದೆ.
ಬೆಳ್ಳಿ ಬೆಲೆಯಲ್ಲಿ ಏಕಾಏಕಿ 20 ಸಾವಿರ ರೂಪಾಯಿ ಹೆಚ್ಚಳವಾಗಿದ್ದು, ಬೆಳ್ಳಿ ದರ ಮತ್ತೆ 2.80 ಲಕ್ಷ ರೂಪಾಯಿಗೆ ಜಿಗಿದಿದೆ. ಇತ್ತೀಚಿನ ದಿನಗಳಲ್ಲಿ ಕಂಡಿರದ ಮಟ್ಟಿಗೆ ಬೆಳ್ಳಿ ಬೆಲೆ ಏರಿಕೆಯಾಗಿದೆ.
ಇತ್ತ ಅಪರಂಜಿ ಚಿನ್ನದ ಬೆಲೆಯಲ್ಲೂ ಗಣನೀಯ ಏರಿಕೆ ದಾಖಲಾಗಿದ್ದು, ಶುದ್ಧ ಚಿನ್ನದ ದರ 1.62 ಲಕ್ಷ ರೂಪಾಯಿಗೆ ತಲುಪಿದೆ. ಇವತ್ತು ಮಾತ್ರವೇ ಚಿನ್ನದ ದರದಲ್ಲಿ 3,150 ರೂಪಾಯಿ ಜಂಪ್ ಕಂಡುಬಂದಿದೆ.
ಗ್ಲೋಬಲ್ ಮಾರ್ಕೆಟ್ನಲ್ಲೂ ಚಿನ್ನ–ಬೆಳ್ಳಿ ದರಗಳು ಏರಿಕೆಯಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔನ್ಸ್ ಚಿನ್ನದ ಬೆಲೆ ಈಗ 4,965 ಡಾಲರ್ಗೆ ತಲುಪಿದೆ. ಅದೇ ರೀತಿ ಔನ್ಸ್ ಬೆಳ್ಳಿ ಬೆಲೆ 77.08 ಡಾಲರ್ಗೆ ಜಿಗಿದಿದೆ.
ಜಾಗತಿಕ ಆರ್ಥಿಕ ಅನಿಶ್ಚಿತತೆ, ಹೂಡಿಕೆದಾರರ ಹೆಚ್ಚಿದ ಬೇಡಿಕೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವವೇ ಈ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ …
