
ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ವಿರುದ್ದ ಸೋತ ಬಳಿಕ ಆಸ್ಟ್ರೇಲಿಯಾದ ಸ್ವೀವ್ ಸ್ಮಿತ್ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಹಂಗಾಮಿ ನಾಯಕನ್ನಾಗಿ ತಂಡವನ್ನ ಮುನ್ನಡೆಸಿದ್ದ ವರ್ಷದ ಸ್ಮಿತ್ ಭಾರತ ವಿರುದ್ದ ಸೆಮಿಪೈನಲ್ನಲ್ಲಿ ತಂಡ ಸೋತಿತ್ತು. ಆದಾದ ಮರುದಿನವೇ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ಇದು ನನ್ನ ಕೊನೆಯ ಏಕದಿನ ಪಂದ್ಯವಾಗಿತ್ತು. ನಾನು ಈ ಸ್ವರೂಪದಲ್ಲಿ ಆಡುವುದನ್ನು ತುಂಬಾ ಆನಂದಿಸಿದ್ದೇನೆ. ಆದರೆ ಇದೀಗ ಸಮಯ ಬಂದಿದೆ. ಪ್ರತಿಯೊಂದನ್ನು ನಾನು ಸಂತೋಷದಿಂದ ಅನುಭವಿಸಿದ್ದೇನೆ. ಅನೇಕ ಸುಂದರ ಕ್ಷಣಗಳು,ನೆನಪುಗಳು ನನ್ನ ಮನಸ್ಸಿನಲ್ಲಿ ಉಳಿಯಲಿದೆ ಎಂದು ಸ್ಟೀವ್ ಸ್ಮಿತ್ ತಿಳಿಸಿದ್ದಾರೆ. 169 ಪಂದ್ಯಗಳನ್ನಾಡಿರುವ ಸ್ಮಿತ್ ಏಕದಿನ ಕ್ರಿಕೆಟ್ನಲ್ಲಿ ಒಟ್ಟು 5727 ರನ್ ಗಳಿಸಿದ್ದಾರೆ. ಅದರಲ್ಲಿ 12 ಶತಕ, 34 ಅರ್ಧಶತಕ ಸಿಡಿಸಿದ್ದಾರೆ. ಅಲ್ಲದೇ ಆಸ್ಟ್ರೇಲಿಯಾ ಪರ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಹಾಕಿದ 12ನೇ ಆಟಗಾರನ್ನಾಗಿದ್ದಾರೆ. ಟೆಸ್ಟ್ ಹಾಗೂ ಟಿ20 ಕ್ರಿಕೆಟ್ನಲ್ಲಿ ಹೆಚ್ಚಾಗಿ ಗಮನ ಹರಿಸಲು ಸ್ಟೀವ್ ಸ್ಮಿತ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ….

ಅಭಿಷೇಕ್.ಎಸ್