ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ, ನಾಲ್ವರು ಗಗನಯಾತ್ರಿಗಳನ್ನು ಸ್ಪೇಸ್ಎಕ್ಸ್ನ ಕ್ರೂ-8 ನೌಕೆ ಸುರಕ್ಷಿತವಾಗಿ ಭೂಮಿಗೆ ಕರೆತಂದಿದ್ದು, ನೌಕೆ ಸಮುದ್ರದಲ್ಲಿ ಬೀಳುತ್ತಿದ್ದಂತೆ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ನಾಸಾ ಹೇಳಿಕೆ ನೀಡಿದ್ದಾರೆ.
ನಾಸಾದ ಗಗನಯಾತ್ರಿಗಳಾದ ಮ್ಯಾಥ್ಯೂ ಡೊಮಿನಿಕ್, ಮೈಕೆಲ್ ಬ್ಯಾರಟ್, ಜೆನೆತ್ ಏಪ್ಸ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗ್ರೆಬಿನ್ಕಿನ್ ಇದ್ದಂತಹ ನೌಕೆ ಶುಕ್ರವಾರ ಮೆಕ್ಸಿಕೋ ಬಳಿ ಸಮುದ್ರಕ್ಕೆ ಬಿದ್ದಿದ್ದು, ವಿಷಯ ತಿಳಿದ ತಕ್ಷಣವೇ ಸ್ಪೇಸ್ಎಕ್ಸ್ನ ಕ್ರೂ-8 ನೌಕೆ ನಾಲ್ವರನ್ನು ರಕ್ಷಿಸಿದೆ. ಬಾಹ್ಯಾಕಾಶ ಕೇಂದ್ರದಲ್ಲಿದ್ದ ಸಮಯದಲ್ಲಿ ಇವರು ಸಾಕಷ್ಟು ಸಂಶೋಧನೆಗಳನ್ನು ಕೈಗೊಂಡಿದ್ದರು. ಈ ವರ್ಷ ಮಾರ್ಚ್ನಲ್ಲಿ ಈ ನೌಕೆಯನ್ನು ಉಡಾವಣೆ ಮಾಡಲಾಗಿತ್ತು.