ಜ.30ರಿಂದ ಹರಿಯಾಣ ವಿರುದ್ದ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟಗೊಂಡಿದೆ. ತಂಡದಲ್ಲಿ ಅನುಭವಿ ಆಟಗಾರ ಕೆ ಎಲ್ ರಾಹುಲ್ಗೆ ಸ್ಥಾನ ನೀಡಲಾಗಿದೆ. ಕಾಂಗರೂಗಳ ನಾಡಿನಲ್ಲಿ ಹೀನಾಯವಾಗಿ ಸರಣಿ ಸೋತ ಬಳಿಕ ಹಿರಿಯ ಆಟಗಾರರಿಗೆ ದೇಶಿ ಟೂರ್ನಿಗಳಲ್ಲಿ ಭಾಗವಹಿಸುವಂತೆ ಬಿಸಿಸಿಐ ಖಡಕ್ ಸೂಚನೆ ಕೊಟ್ಟಿತ್ತು, ಹೀಗಾಗಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ರಿಷಬ್ ಪಂತ್ ಸೇರಿದಂತೆ ಹಲವು ಸ್ಟಾರ್ ಆಟಗಾರರು ತಮ್ಮ ತವರು ತಂಡದ ಪರವಾಗಿ ಆಡುತ್ತಿದ್ದಾರೆ. ವಿರಾಟ್ ಕೊಹ್ಲಿ 13 ವರ್ಷಗಳ ಬಳಿಕ ರಣಜಿ ಪಂದ್ಯದಲ್ಲಿ ಆಡುತ್ತಿದ್ದಾರೆ. ಕೆಎಲ್ ರಾಹುಲ್ 5 ವರ್ಷಗಳ ಬಳಿಕ ರಾಜ್ಯ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. 2020 ಫೆಬ್ರವರಿಯಲ್ಲಿ ವೆಸ್ಟ್ ಬೆಂಗಾಲ್ ವಿರುದ್ದ ಆಂತಿಮವಾಗಿ ರಣಜಿ ಪಂದ್ಯನ್ನಾಡಿದ್ದರು. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಕರ್ನಾಟಕ ತಂಡ ಮುಂದಿನ ಹಂತಕ್ಕೆ ಪ್ರವೇಶ ನೀಡಬೇಕಾದರೆ ಹರಿಯಾಣ ವಿರುದ್ದ ಬೋನಸ್ ಅಂಕದೊಂದಿಗೆ ಗೆಲ್ಲಬೇಕಿದೆ.

ಕರ್ನಾಟಕ ತಂಡ
ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಶ್ರೇಯಸ್ ಗೋಪಾಲ್, ಶ್ರೀಜಿತ್ ( ವಿಕೆಟ್ ಕೀಪರ್), ಅಭಿನವ್ ಮನೋಹರ್, ಹಾರ್ದಿಕ್ ರಾಜ್, ಪ್ರಸಿದ್ದ್ ಕೃಷ್ಣ, ವಿದ್ವತ್ ಕಾವೇರಪ್ಪ, ಮೊಹ್ಸಿನ್ ಖಾನ್, ಸುಜಯ್ ಸಾತೇರಿ, ಮಿಕಿನ್ ಜೋಸ್, ಅಭಿಲಾಷ್ ಶೆಟ್ಟಿ ಯಶೋವರ್ಧನ್ ಪರಂತಪ್, ವಾಸುಕಿ ಕೌಶಿಕ್,