
ಬೆಂಗಳೂರು: ರಾಜಧಾನಿಯ ಬಾಣಸವಾಡಿಯ OMBR ಲೇಔಟ್ನಲ್ಲಿ ನಡೆದ ಯುವತಿಯ ಮೇಲೆ ಬೀದಿ ನಾಯಿಯ ದಾಳಿ ಜನರಲ್ಲಿ ಆತಂಕ ಹುಟ್ಟಿಸಿದೆ. ಈ ದಾಳಿಯಿಂದ ಯುವತಿಯ ಕಾಲಿಗೆ ಗಾಯವಾಗಿದ್ದು, ಈ ದುರಂತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿಗೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ನಡೆದಿದ್ದ ಮತ್ತೊಂದು ಘಟನೆ ಮಾಸುವ ಮುನ್ನವೇ ಈ ಕೇಸ್ ಬೆಳಕಿಗೆ ಬಂದಿದೆ. OMBR ಲೇಔಟ್ನಲ್ಲಿ ಶ್ವಾನಗಳ ಹಾವಳಿ ಹೆಚ್ಚಾಗಿದ್ದು, 36 ಶ್ವಾನಗಳ ದಾಳಿಯಿಂದ ಜನರು ತೀವ್ರವಾಗಿ ಹೆದರಿದ್ದಾರೆ.
ಶ್ವಾನಗಳ ದಾಳಿಯಿಂದ ಕಂಗೆಟ್ಟಿರುವ OBMR ಲೇಔಟ್ನ ಜನರು, ತಮ್ಮ ನಿವಾಸಗಳನ್ನು ಬಿಟ್ಟು ಹೋಗುವ ಪರಿಸ್ಥಿತಿ ಉಂಟಾಗಿದೆ. ಶ್ವಾನಗಳ ಹಾವಳಿಯಿಂದ ರೋಸಿ ಹೋಗಿರುವ ಜನರು,OBMR ಲೇಔಟ್ನ್ನು ತೊರೆದು ಬೇರೆಡೆಗೆ ಸ್ಥಳಾಂತರಾಗುವ ಕುರಿತು ಚಿಂತನೆ ನಡೆಸುತ್ತಿದ್ದಾರೆ.
