
ಐಪಿಎಲ್ 2025ರ ಟೂರ್ನಿಗೆ 22 ದಿನಗಳು ಮಾತ್ರ ಬಾಕಿ ಉಳಿದಿವೆ. ಕಳೆದ ಆವೃತ್ತಿಗಳಲ್ಲಿ ಒಂದು ಬಾರಿಯೂ ಪ್ರಶಸ್ತಿ ಗೆಲುವಲ್ಲಿ ವಿಫಲವಾಗಿರುವ ಬೆಂಗಳೂರು ತಂಡ ಈ ಬಾರಿ ಶತಾಯಗತಾಯ ಕಪ್ ಗೆಲ್ಲಬೇಕೆಂಬ ಇರಾದೆಯಲ್ಲಿದೆ. ಅದರಂತೆ ಐಪಿಎಲ್ ಹರಾಜಿನಲ್ಲಿ ಸಮತೋಲ ತಂಡವನ್ನು ಕಟ್ಟುವಲ್ಲಿ ಆರ್ಸಿಬಿ ಯಶಸ್ವಿಯಾಗಿದೆ. ತಂಡದ ಪ್ರದರ್ಶನ ಇನ್ನೊಂದು ಹಂತಕ್ಕೆ ಕರೆದುಕೊಂಡು ಹೋಗಲು ತಂಡದ ಫೀಲ್ಡಿಂಗ್ ಕೋಚ್ ಆಗಿ ಸುರೇಶ್ ರೈನಾ ಆಯ್ಕೆಯಾಗಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಮಿಸ್ಟರ್ ಐಪಿಎಲ್ ಎಂದೇ ಫೇಮಸ್ ಆಗಿರುವ ಸುರೇಶ್ ರೈನಾ ಐಪಿಎಲ್ನಲ್ಲಿ ಸಿಎಸ್ಕೆ ಪರ ಹಲವು ವರ್ಷಗಳ ಕಾಲ ಆಡಿದ್ದಾರೆ. ಫೀಲ್ಟಿಂಗ್ನಲ್ಲಿ ತಮ್ಮ ಕರಾಮತ್ತನ್ನು ತೋರಿಸಿದ್ದಾರೆ. ಇದಕ್ಕಾಗಿಯೇ ಬೆಂಗಳೂರು ತಂಡ ರೈನಾ ಅವರ ಜೊತೆ ಮಾತುಕತೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಮಾರ್ಚ್ 22ರಿಂದ ಸೀಸನ್ 18ರ ಐಪಿಎಲ್ ಟೂರ್ನಿ ಶುರುವಾಗಲಿದ್ದು ಆರ್ಸಿಬಿ ಇದಾಗಲೇ ಪ್ರಾಕ್ಟೀಸ್ ಪ್ರೀಕ್ಯಾಂಪ್ ಅನ್ನು ಶುರುಮಾಡಿದೆ. ರಜತ್, ಭುವಿ, ಕೃನಾಲ್, ಯಶ್ ಸೇರಿದಂತೆ ಹಲವು ಆಟಗಾರರು ಕ್ಯಾಂಪ್ನಲ್ಲಿ ಭಾಗಿಯಾಗಿದ್ದಾರೆ.

ಅಭಿಷೇಕ್.ಎಸ್