
ಭಾರತದ ನಾಯಕ ರೋಹಿತ್ ಶರ್ಮಾ 2 ಐಸಿಸಿ ಚಾಂಪಿಯನ್ಸ್ ಗೆದ್ದ ಸಾಧನೆಯನ್ನು ಮಾಡಿದ್ದಾರೆ. 2024 ಟಿ-20 ವಿಶ್ವಕಪ್ ಗೆದಿದ್ದ ರೋಹಿತ್ ಶರ್ಮಾ ಇದೀಗ ಚಾಂಪಿಯನ್ಸ್ ಟ್ರೋಫಿ ಗೆದ್ದು ಎರಡು ಅಥವಾ ಅದಕ್ಕಿಂತ ಹೆಚ್ಚು ಐಸಿಸಿ ಪ್ರಶಸ್ತಿ ಗೆದ್ದವರ ಪೈಕಿ ರೋಹಿತ್ ಭಾರತದ ಎರಡನೇ ನಾಯಕರಾಗಿದ್ದಾರೆ. ಈ ಹಿಂದೆ ಎಂ ಎಸ್ ಧೋನಿ 2007ರ ಟಿ-20 ವಿಶ್ವಕಪ್, 2011ರ ಏಕದಿನ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದು ಅತಿ ಹೆಚ್ಚು ಐಸಿಸಿ ಟ್ರೋಫಿ ಗೆದ್ದ ನಾಯಕರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅಂದ ಹಾಗೇ ವಿಶ್ವದಲ್ಲಿ ಅತಿ ಹೆಚ್ಚು ಐಸಿಸಿ ಟ್ರೋಫಿ ಗೆದ್ದವರಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ (4), ಭಾರತದ ಎಂ ಎಸ್ ಧೋನಿ (3), ವೆಸ್ಟ್ ಇಂಡೀಸ್ನ ಕ್ಲೈವ್ ಲಾಯ್ಡ್ (2), ಆಸ್ಟ್ರೇಲಿಯಾದ ಮತ್ತೊಬ್ಬ ನಾಯಕ ಪ್ಯಾಟ್ ಕಮಿನ್ಸ್ (2) ವೆಸ್ಟ್ ಇಂಡೀಸ್ನ ಡ್ಯಾರೆನ್ ಸ್ವಾಮಿ (2)ಇದ್ದಾರೆ. ಸದ್ಯಕ್ಕೆ ರೋಹಿತ್ ಶರ್ಮಾ ಹಾಗೂ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಕ್ರಿಯರಾಗಿದ್ದು ಐಸಿಸಿ ಟೂರ್ನಿಯನ್ನು ಇನ್ನೆಷ್ಟು ಗೆಲ್ಲಬಹುದು ಎಂಬ ಲೆಕ್ಕಚಾರದಲ್ಲಿ ಅಭಿಮಾನಿಗಳಿದ್ದಾರೆ

ಅಭಿಷೇಕ್. ಎಸ್