ಬೆಂಗಳೂರು : ತಂದೆಯಿಂದಲೇ ಮಗನ ಕೊಲೆಯಾಗಿದ್ದು, ಈ ಘಟನೆ ಕೆಂಗೇರಿ ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿಯಲ್ಲಿ ನಡೆದಿದೆ. ಹೌದು ಕುಡಿದು ಬಂದು ಪ್ರತಿನಿತ್ಯ ಮಗ ಗಲಾಟೆ ಮಾಡುತ್ತಿದ್ದ ಈ ಹಿನ್ನೆಲೆಯಲ್ಲಿ ಮಗನ ಕೈ ಕಾಲು ಕಟ್ಟಿ ತಂದೆ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ.
ಮಗ ಕುಡಿದು ಬಂದು ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದ, ಹಾಗಾಗಿ ಮಗನ ಕಿರುಕುಳಕ್ಕೆ ಬೇಸತ್ತ ತಂದೆಯಿಂದಲ್ಲೇ ಮಗ ರಾಜೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.
ರಾಜೇಶ್ ಕುಡಿದು ಬಂದು ರಾತ್ರಿ ಗಲಾಟೆ ಮಾಡಿದ್ದು, ಮನೆಯ ಕಿಟಕಿ ಒಡೆದು ಗೇಟ್ ಒದ್ದು ತಂದೆ ಲಿಂಗಪ್ಪ ಮೇಲೂ ಹಲ್ಲೆ ಮಾಡಿದ್ದಾನೆ. ಇದರಿಂದ ಮನನೊಂದ ತಂದೆ ಮಗನ ಕಾಟ ತಾಳಲಾರದೆ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಆರೋಪಿ ಲಿಂಗಪ್ಪ ನನ್ನ ಪೊಲೀಸರು ಬಂಧಿಸಿದ್ದು, ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : https://ashwaveega.com/siddaramaiah-should-resign-immediately-chalavadi-narayanaswamy/