ಚಿಕ್ಕೋಡಿ : ಬೆಳಗಾವಿಜಿಲ್ಲೆಯ ಚಿಕ್ಕೋಡಿಯಲ್ಲಿ ಬೈಕ್ ಹಾಗೂ ಟಿಪ್ಪರ್ ನಡುವೆ ರಸ್ತೆ ಅಪಘಾತ ಸಂಭವಿಸಿದ್ದು, ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಕೋರ್ಟ್ ಸರ್ಕಲ್ ಬಳಿ ಈ ಘಟನೆ ನಡೆದಿದೆ. ಈ ಘಟನೆಯಾಲ್ಲಿ ಬೈಕ್ ಸವಾರನಿಗೆ ತೀವ್ರ ಗಾಯಗೊಂಡಿದ್ದು, ಬೈಕ್ ಮೇಲಿದ್ದ ಬಿದ್ದ ಸುಪ್ರಿತ್ ಮಾನೆ, ಪಾರ್ವತಿ ಮಾನೆ ಗಂಭೀರ ಗಾಯಾವಾಗಿದೆ.
ಇನ್ನೂಈ ವೇಳೆ ಗಾಯಾಳುಗಳು ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದವರು ಎಂದು ತಿಳಿದು ಬಂದಿದ್ದು, ಗಾಯಾಳುಗಳನ್ನು ಚಿಕಿತ್ಸೆಗೆಂದು ಹುಕ್ಕೇರಿ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ದಾಖಲಾಗಿದೆ.