ರಾಜ್ಯ ಗ್ಯಾರಂಟಿ ಸರ್ಕಾರ ರಾಜ್ಯದಲ್ಲಿರುವ ಬಿಪಿಎಲ್ ಕಾರ್ಡ್ ಪರೀಕ್ಷರಣೆ ಮಾಡಲು ಹಾಗೂ ಬಿಪಿಎಲ್ ಕಾರ್ಡ್ ರದ್ದು ಮಾಡಲು ಇವತ್ತಿನಿಂದ ಕೆಲಸ ಆರಂಭ ಮಾಡಿದೆ. ಅಷ್ಟಕ್ಕೂ ಯಾಕೇ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ರದ್ದು ಮಾಡ್ತಿದೆ. ಅಯ್ಯೋ ನಿಮ್ಮ ಕಾರ್ಡ್ ರಾದ್ದಾಗುತ್ತಾ ಅಂತೀರಾ ಹಾಗಾದ್ರೆ ಈ ಸುದ್ದಿ ಮಿಸ್ ಮಾಡ್ದೆ ಓದಿ.
ರಾಜ್ಯ ಸರ್ಕಾರ ಬಡವರ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲು ಹಾಗೂ ಪರೀಕ್ಷಾರಣೆ ಮಾಡಲು ಇದೀಗ ಮುಂದಾಗಿದೆ. ಈಗಾಗ್ಲೇ ಇಂದಿನಿಂದ ಈ ಪರೀಕ್ಷಾರಣೆ ಮಾಡುವ ಕೆಲಸವನ್ನು ರಾಜ್ಯ ಸರ್ಕಾರ ಆರಂಭ ಮಾಡಿದೆ. ಜೊತೆಗೆ ರಾಜ್ಯದಲ್ಲಿ ಈಗಾಗಲೇ ಒಟ್ಟು 3.63 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ಇದೀಗ ರೆದ್ದು ಮಾಡಿದೆ ರಾಜ್ಯ ಸರ್ಕಾರ. ಈ ಪೈಕಿ ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ ಒಟ್ಟು 18048 ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿದೆ ರಾಜ್ಯ ಸರ್ಕಾರ. ಇಗಾಗ್ಲೇ ಹೇಳದೆ ಕೇಳದೆ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿದೆ ರಾಜ್ಯ ಸರ್ಕಾರ.ಜೊತೆಗೆ ಹೇಳದೆ ಕೇಳ್ದೆ ಬಿಪಿಎಲ್ ಇಂದ ಎಪಿಎಲ್ ಕಾರ್ಡ್ ಗೆ ವರ್ಗಾವಣೆ ಮಾಡಲು ಸಹ ರಾಜ್ಯ ಸರ್ಕಾರ ಮುಂದಾಗಿದೆ. ಇನ್ನು ರದ್ಧತಿ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮುಗಿಬಿಳುತ್ತಿದ್ದೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರ ಇಡೀ ಕರ್ನಾಟಕದಲ್ಲಿ ಒಟ್ಟು 14 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ರದ್ದು ಮಾಡಲು ಚಿಂತನೆ ಮಾಡಿದೆ. ಈ ಪೈಕಿ 2.75 ಲಕ್ಷಕ್ಕೂ ಹೆಚ್ಚು ಜನರು ಕಳೆದ ಆರು ತಿಂಗಳಿಂದ ಪಡಿತರ ಪಡದೆ ಇಲ್ಲಾ. ಜೊತೆಗೆ 4036 ಜನರು ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರು ಆಗಿದ್ದಾರೆ. ಅಷ್ಟೇ ಅಲ್ಲದೆ 10.9.479 ಲಕ್ಷ ಜನರು ಸುಮಾರು 1ಲಕ್ಷಗಿಂತ ಹೆಚ್ಚು ವಾರ್ಷಿಕ ಆದಾಯ ಇರುವ ಕುಟುಂಬ ಆಗಿವೆ ಹಾಗಾಗಿ ಒಟ್ಟು 14 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡ್ತಿದೆ ರಾಜ್ಯ ಸರ್ಕಾರ. ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಕಾರ್ಡ್ ರದ್ದು ಮಾಡಲಾಗಿದೆ ಉಳಿದ 10ಲಕ್ಷಕ್ಕೂ ಹೆಚ್ಚು ಕಾರ್ಡ್ ರದ್ದು ಮಾಡುವ ಕೆಲಸವನ್ನು ಇಂದಿನಿಂದ ಆರಂಭ ಮಾಡಿದೆ ಸರ್ಕಾರ
ಒಟ್ಟಾರೆಯಾಗಿ ರಾಜ್ಯ ಸರ್ಕಾರ ಹೇಳದೆ ಕೇಳದೆ ಬಿಪಿಎಲ್ ಕಾರ್ಡ್ ರದ್ದು ಮಾಡ್ತಿದ್ದು ಇದೀಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ ರಾಜ್ಯ ಸರ್ಕಾರ. ಇನ್ನುಮುಂದೆ ಆದರೂ ಜನರ ಬೇಡಿಕೆಗೆ ಸರ್ಕಾರ ಮಣಿಯುತ್ತಾ ಅನ್ನೋದೆ ಯಕ್ಷ ಪ್ರಶ್ನೆ ಆಗಿದೆ