
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯಲ್ಲಿ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಕಳಪೆಯಾಟ ಆಡಿದ್ದರು. ಕಳೆದ ನಾಲ್ಕು ಇನ್ನಿಂಗ್ಸ್ನಲ್ಲಿ 0,4.5,23 ಗಳಿಸಲಷ್ಟೇ ಶಕ್ತರಾಗಿದ್ದರು. ಇದರಿಂದ ಅವರ ಬ್ಯಾಟಿಂಗ್ ಬಗ್ಗೆ ಹಲವು ಟೀಕೆಗಳು ಸಹ ಕೇಳಿ ಬಂದಿದ್ದವು. ಆದರೆ ಸಾಲ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ತಮ್ಮ ನೈಜ ಆಟವನ್ನು ಪ್ರದರ್ಶಿಸಿದ್ದಾರೆ. ನೆನ್ನೆ ನಡೆದ ಪಂದ್ಯದಲ್ಲಿ ಸಾಲ್ಟ್ ಸರಣಿಯಲ್ಲಿ ಮೊದಲ ಬಾರಿಗೆ ಅರ್ಧ ಶತಕ ಸಿಡಿಸಿದ್ದರು. ಎದುರಿಸಿದ 23 ಎಸೆತಗಳಲ್ಲಿ 55 ರನ್ ಗಳಿಸಿ ಫಾರ್ಮ್ ಸಮಸ್ಯೆಯಿಂದ ಹೊರಬಂದ ಸುಳಿವು ನೀಡಿದರು.

ಸಾಲ್ಟ್ ಅವರ ಇನ್ನಿಂಗ್ಸ್ನಲ್ಲಿ 7 ಪೋರ್ ಹಾಗೂ 3 ಸಿಕ್ಸರ್ ಒಳಗೊಂಡಿತ್ತು. ಇನ್ನೂ ಇಂಗ್ಲೆಂಡ್ ತಂಡದ ಸ್ಪೋಟಕ ಓಪನರ್ನನ್ನು ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ತಂಡ ಖರೀದಿ ಮಾಡಿತ್ತು. ಈ ಹಿಂದೆ ಸಾಲ್ಟ್ ಕೆಕೆಆರ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿಗೆ ಆಡಿದ್ದಾರೆ. ಐಪಿಎಲ್ನಲ್ಲಿ 21 ಪಂದ್ಯಗಳನ್ನು ಆಡಿರುವ ಸಾಲ್ಟ್ ಒಟ್ಟು 653 ರನ್ಗಳನ್ನು ಕಲೆ ಹಾಕಿದ್ದಾರೆ..
