
ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಯ 9ನೇ ಆವೃತ್ತಿಗೆ ನಾಳೆ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ 2017ರ ಚಾಂಪಿಯನ್ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಎದುರಾಗಲಿವೆ. ಈ ಪಂದ್ಯ ಪಾಕಿಸ್ತಾನದ ಕರಾಚಿಯಲ್ಲಿ ನಡೆಯಲಿದೆ. ಫೆಬ್ರವರಿ 20ರಂದು ಭಾರತ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ದ ಆಡಲಿದೆ. ಲೀಗ್ ಹಂತದಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿದ್ದು 8 ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ವಿಜೇತ ತಂಡಕ್ಕೆ 19+.4 ಕೋಟಿ ನಗದು ಬಹುಮಾನ ಘೋಷಿಸಲಾಗಿದೆ. ರನ್ನರ್ ಅಪ್ ತಂಡಕ್ಕೆ 9.72 ಕೋಟಿ ನೀಡಲಾಗುತ್ತದೆ.
GROUP A
ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಬಾಂಗ್ಲಾದೇಶ
GROUP B
ಆಸ್ಟ್ರೇಲಿಯಾ, ಇಂಗ್ಲೆಂಡ್,ದಕ್ಷಿಣ ಆಫ್ರಿಕಾ, ಆಫ್ಘಾನಿಸ್ತಾನ
ಟೂರ್ನಿಯ ಸ್ವರೂಪ
ಟೂರ್ನಿಯಲ್ಲಿ 8 ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿ ತಂಡವು ಗುಂಪಿನ ಇತರೆ ತಂಡದ ವಿರುದ್ದ ಒಂದು ಪಂದ್ಯ ಆಡಲಿದೆ. ಗುಂಪು ಹಂತದಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಹಂತಕ್ಕೆ ತಲುಪಲಿದೆ. ಸೆಮಿಫೈನಲ್ನಲ್ಲಿ ಗೆಲ್ಲುವ ತಂಡ ಪೈನಲ್ ಪಂದ್ಯ ಆಡಲಿದೆ.

ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ
ಪಾಕಿಸ್ತಾನ Vs ನ್ಯೂಜಿಲೆಂಡ್ ಫೆ.19 ಕರಾಚಿ
ಭಾರತ Vs ಬಾಂಗ್ಲಾದೇಶ ಫೆ.20 ದುಬೈ
ಅಫ್ಘಾನಿಸ್ತಾನ Vs ದಕಿಣ ಆಫ್ರಿಕಾ ಫೆ.21 ಕರಾಚಿ
ಆಸ್ಟ್ರೇಲಿಯಾ Vs ಇಂಗ್ಲೆಂಡ್ ಫೆ. 22 ಲಾಹೋರ್
ಭಾರತ Vs ಪಾಕಿಸ್ತಾನ ಫೆ.23 ದುಬೈ
ಬಾಂಗ್ಲಾದೇಶ Vs ನ್ಯೂಜಿಲೆಂಡ್ ಫೆ.24 ರಾವಲ್ಪಿಂಡಿ
ಆಸ್ಟ್ರೇಲಿಯಾ Vs ದಕ್ಷಿಣ ಆಫ್ರಿಕಾ ಫೆ.25 ರಾವಲ್ಪಿಂಡಿ
ಅಫ್ಘಾನಿಸ್ತಾನ Vs ಇಂಗ್ಲೆಂಡ್ ಫೆ.26 ಲಾಹೋರ್
ಪಾಕಿಸ್ತಾನ Vs ಭಾಂಗ್ಲಾದೇಶ ಫೆ.27 ರಾವಲ್ಪಿಂಡಿ
ಅಫ್ಘಾನಿಸ್ತಾನ Vs ಆಸ್ಟ್ರೇಲಿಯಾ ಫೆ.28 ಲಾಹೋರ್
ದಕ್ಷಿಣ ಆಫ್ರಿಕಾ Vs ಇಂಗ್ಲೆಂಡ್ ಮಾ.1 ಕರಾಚಿ
ಭಾರತ Vs ನ್ಯೂಜಿಲೆಂಡ್ ಮಾ.2 ದುಬೈ
1 ನೇ ಸೆಮಿಫೈನಲ್ ಮಾ.4 ದುಬೈ
2 ನೇ ಸೆಮಿಫೈನಲ್ ಮಾ.5 ಲಾಹೋರ್
ಫೈನಲ್ : ಮಾ.9 ಲಾಹೋರ್/ ದುಬೈಈ ಬಾರಿ ಚಾಂಪಿಯನ್ಸ್ ಟ್ರೋಫಿಯು 4 ಕ್ರೀಡಾಂಗಣದಲ್ಲಿ ನಡೆಯಲಿದೆ. ಕರಾಚಿಯಲ್ಲಿ 3 ಪಂದ್ಯಗಳು,ಲಾಹೋರ್ನಲ್ಲಿ 5 ಪಂದ್ಯಗಳು, ರಾವಲ್ಪಿಂಡಿಯಲ್ಲಿ 3 ಪಂದ್ಯಗಳು ಹಾಗೂ ದುಬೈಯಲ್ಲಿ 5 ಪಂದ್ಯಗಳು ನಡೆಯಲಿವೆ
ಅಭಿಷೇಕ್ ಎಸ್