
Mnu-minchu
Ashwaveega News 24×7 ಅ. 07: ಸಹ ಕಲಾವಿದೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ನಟ ಮಡೆನೂರು ಮನು ಜೈಲುಪಾಲಾಗಿ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ಕೇಸ್ ಬಗ್ಗೆ ಇಬ್ಬರ ನಡುವೆ ಸಂಧಾನ ಮಾತುಕತೆಯ ನಂತr, ಸಂತ್ರಸ್ತೆ ನಟ ಮಡೆನೂರು ಮನು ವಿರುದ್ಧದ ಅತ್ಯಾಚಾರ ಪ್ರಕರಣವನ್ನು ಹಿಂಪಡೆದಿರುವುದಾಗಿ ತಿಳಿದು ಬಂದಿದೆ.
ಸ್ಯಾಂಡಲ್ ವುಡ್ ನಟ ಮಡೆನೂರು ಮನು ವಿರುದ್ಧ ಕೆಲ ದಿನಗಳ ಹಿಂದೆ ಸಹ ಕಲಾವಿದೆಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದಂತ ಸಂತ್ರಸ್ತೆಯ ದೂರಿನ ಹಿನ್ನಲೆಯಲ್ಲಿ ನಟ ಮಡೆನೂರು ವಿರುದ್ಧ FIR ದಾಖಲಾಗಿತ್ತು.
ಈ ಪ್ರಕರಣದಲ್ಲಿ ನಟ ಮಡೆನೂರು ಮನು ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದಂತ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿತ್ತು.
ಆ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಇಬ್ಬರ ನಡುವೆ ಕಾಂಪ್ರಮೈಸ್ ಆಗಿರುವ ಕಾರಣ, ಪ್ರಕರಣವನ್ನು ಸಂತ್ರಸ್ತೆ ಹಿಂಪಡೆದಿರುವುದಾಗಿ ಕೋರ್ಟ್ ಅವರಣದಲ್ಲಿ ವಕೀಲರ ಸಮ್ಮಖದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.