Ashwaveega News 24×7 ಜನವರಿ 6 – ನಟ ಯಶ್ ಜನ್ಮದಿನದ ಅಂಗವಾಗಿ, ಬೆಂಗಳೂರಿನ ‘ನಮ್ಮ ಮೆಟ್ರೋ’ ರೈಲಿನ ಮೇಲೆ ಅವರ ಬೃಹತ್ ಚಿತ್ರವಿರುವ ಜಾಹೀರಾತನ್ನು ಅಳವಡಿಸಿ ವಿನೂತನವಾಗಿ ಶುಭ ಕೋರಲಾಗಿದೆ. ಅಭಿಮಾನಿಗಳು ಈ ಪ್ರಚಾರ ಕೈಗೊಂಡಿರಬಹುದೆಂದು ಚರ್ಚೆಯಾಗುತ್ತಿದೆ. ಯಶ್ ಚಿತ್ರ ಹೊತ್ತ ಮೆಟ್ರೋ ಸಂಚರಿಸುವ ವಿಡಿಯೋಗಳು ವೈರಲ್ ಆಗಿದೆ.

ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದ ಪ್ರಯುಕ್ತ, ಬೆಂಗಳೂರಿನ ‘ನಮ್ಮ ಮೆಟ್ರೋ’ ರೈಲಿನ ಮೇಲೆ ಅವರ ಬೃಹತ್ ಚಿತ್ರವಿರುವ ಜಾಹೀರಾತನ್ನು ಅಳವಡಿಸಿ ವಿನೂತನವಾಗಿ ಶುಭ ಕೋರಲಾಗಿದೆ. ಇದು ಅಭಿಮಾನಿಗಳ ಕಾರ್ಯವೋ ಅಥವಾ ‘ಟಾಕ್ಸಿಕ್’ ಚಿತ್ರತಂಡದ ಪ್ರಚಾರ ತಂತ್ರವೋ ಎಂಬ ಚರ್ಚೆ ಶುರುವಾಗಿದೆ.

ಬೆಂಗಳೂರಿನ ಇತಿಹಾಸದಲ್ಲಿ ಇದು ಪ್ರಪ್ರಥಮ…ನಮ್ಮ ಮೆಟ್ರೋ ರಥದಲ್ಲಿ ಈಗ ರಾಕಿಂಗ್ ಸ್ಟಾರ್ ಯಶ್ ಜನ್ಮದಿನದ ಮೆರವಣಿಗೆ…ಚರಿತ್ರೆ ಸೃಷ್ಟಿಸಿದ ಹೆಮ್ಮೆಯ ಕನ್ನಡದ ದಂತಕಥೆ…ರಾಕಿಭಾಯ್ ಗೆ ಜನ್ಮದಿನದ ಶುಭಾಶಯಗಳು..
