
Natural Hair Dye
Ashwaveega News 24×7 ಜು. 31: ಚಿಕ್ಕ ಮಕ್ಕಳಿಂದ ದೂಡ್ಡವರಲ್ಲಿ ಬೆಳ್ಳಗಾಗಿರುವ ಕೂದಲಿನ ಸಮಸ್ಸೆಯಾಗಿ ಕಾಡ್ತಯಿದೆ . ಬಿಳಿ ಕೂದಲನ್ನು ಕಪ್ಪಗಾಗಿಸಬೇಕೆಂದು ಪ್ರತಿಯೊಬ್ಬರೂ ಯೋಚಿಸುತ್ತಾರೆ. ಕೂದಲು ಬಿಳಿಯಾಗಲು ವಯಸ್ಸಾಗಬೇಕೆಂದೇನಿಲ್ಲ, ಸಣ್ಣ ಮಕ್ಕಳ ಕೂದಲು ಬೆಳ್ಳಗಾಗುತ್ತಿದೆ. ಅನೇಕರು ಈ ಬಿಳಿ ಕೂದಲಿನ ಸಮಸ್ಯೆಯನ್ನು ನಿವಾರಿಸಲು ಮಾರುಕಟ್ಟೆಯಲ್ಲಿ ಸಿಗುವ ಹೇರ್ ಡೈ, ಗೋರಂಟಿ, ಕಲರಿಂಗ್ನ್ನು ಬಳಸುತ್ತಿದ್ದಾರೆ.
ಆದರೆ ಅವುಗಳು ರಾಸಾಯನಿಕಗಳನ್ನು ಹೊಂದಿದ್ದು ಕೂದಲಿಗೆ ಹಾನಿಯನ್ನುಂಟು ಮಾಡುತ್ತದೆ. ನಿಮ್ಮ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಪ್ರಕೃತಿಯು ನಮಗೆ ಅನೇಕ ಉಡುಗೊರೆಗಳನ್ನು ಕೊಟ್ಟಿದೆ ಅಂತನೇ ಹೇಳಬಹುದು . ನಾವು ಇಲ್ಲಿ ಒಂದು ಸಿಂಪಲ್ ಟಿಪ್ಸ್ ಹೇಳತ್ತೀವಿ .
ನಾವು ನಿಮಗಾಗಿ ಅಂತಹ ಅದ್ಭುತ ವಿಧಾನವನ್ನು ತಿಳಿಸುತ್ತೇವೆ , ಇದನ್ನು ಬಳಸುವುದರಿಂದ ನಿಮ್ಮ ಕೂದಲಿಗೆ ನೀವು ತಿಂಗಳುಗಟ್ಟಲೆ ಬಣ್ಣ ಹಾಕುವ ಅಗತ್ಯವಿಲ್ಲ. ಬೆಳ್ಳಗಾಗಿರುವ ಕೂದಲನ್ನು ಕಪ್ಪಾಗಿಸಲು ಯಾವುದೇ ಹೇರ್ ಡೈ ಬಳಸುವ ಅಗತ್ಯವೇ ಇಲ್ಲ. ಬದಲಿಗೆ ನಿಮ್ಮ ಮನೆಯಲ್ಲಿರುವ ಒಂದೆರಡು ಪದಾರ್ಥಗಳಿಂದ ಇದು ಸಾಧ್ಯವಾಗುತ್ತದೆ.
ಹೇರ್ ಡೈ ಇಲ್ಲದೆ, ಮೆಹಂದಿ ಬಳಸದೆಯೂ ನೈಸರ್ಗಿಕವಾಗಿ ಬೆಳ್ಳಗಾಗಿರುವ ಕೂದಲನ್ನು ಮರಳಿ ಕಪ್ಪು ಬಣ್ಣಕ್ಕೆ ತಿರುಗಿಸಬಹುದು. ಇದಕ್ಕಾಗಿ ನಿಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಎರಡೇ ಎರಡು ಪದಾರ್ಥಗಳು ಇದ್ರೆ ಸಾಕು . ನೈಸರ್ಗಿಕವಾಗಿ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆಯೇ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಮಾತ್ರವಲ್ಲ, ಕೂದಲನ್ನು ಬೇರುಗಳಿಂದ ಗಟ್ಟಿಯಾಗಿಸಿ ಕಾಂತಿಯುತ, ರೇಷ್ಮೆ ಕೂದಲ ತರಹ ಕಾಣಿಸುತ್ತೆ .
ಪ್ರತಿ ಮನೆಯಲ್ಲೂ ತುಂಬಾ ಸುಲಭವಾಗಿ ಸಿಗುವ ಮೊಸರು ಮತ್ತು ಕರಿಬೇವಿನ ಸೊಪ್ಪನ್ನು ಬಳಸಿ ಬೆಳ್ಳಗಾದ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.
ನೆತ್ತಿಯನ್ನು ಸೋಂಕುಗಳಿಂದ ರಕ್ಷಿಸಿ ತಲೆಹೊಟ್ಟು ನಿವಾರಿಸಲು ದಿವ್ಯೌಷಧಿಯಾಗಿ ಕೆಲಸ ಮಾಡುವ ಮೊಸರು ಬಿಳಿ ಕೂದಲನ್ನು ಕಪ್ಪಾಗಿಸುವಲ್ಲಿಯೂ ಔಷಧಿಯಾಗಿ ಕಾರ್ಯನಿರ್ವಹಿಸುತ್ತೆ .
ಕರಿಬೇವಿನ ಸೊಪ್ಪಿನಲ್ಲಿರುವ ಪೋಷಕಾಂಶಗಳು ಕೂದಲನ್ನು ಬೇರುಗಳಿಂದ ಪೋಷಿಸುವುದರ ಜೊತೆಗೆ ಕೂದಲಿಗೆ ನ್ಯಾಚುರಲ್ ಆಗಿ ಕಪ್ಪು ಬಣ್ಣವನ್ನು ಸಹ ಒದಗಿಸುತ್ತದೆ.
ಒಂದು ಬಟ್ಟಲಿನಷ್ಟು ಕರಿಬೇವಿನ ಸೊಪ್ಪನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಮಿಕ್ಸಿಯಲ್ಲಿ ಹಾಕಿ ರುಬ್ಬಿ. ನಂತರ ಇದಕ್ಕೆ ಅಷ್ಟೇ ಪ್ರಮಾಣದಲ್ಲಿ ಮೊಸರನ್ನು ಹಾಕಿ ಚೆನ್ನಾಗಿ ಬೆರೆಸಿ ಹೇರ್ ಮಾಸ್ಕ್ ತಯಾರಿಸಿಕೊಳ್ಳಿ.
ಮೊಸರಿನೊಂದಿಗೆ ಬೆರೆಸಿದ ಕರಿಬೇವಿನ ಪೇಸ್ಟ್ ಅನ್ನು ಕೂದಲಿನ ಬುಡದಿಂದ ತುದಿಯವರೆಗೂ ಚೆನ್ನಾಗಿ ಹಚ್ಚಿ ಅರ್ಧಗಂಟೆ ಬಳಿಕ ಹೇರ್ ವಾಶ್ ಮಾಡಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಬಾರಿ ಈ ಹೇರ್ ಮಾಸ್ಕ್ ಬಳಸಿದರೆ ತಲೆಯಲ್ಲಿರುವ ಬಿಳಿ ಕೂದಲು ಮಾಯವಾಗಿ ಗಾಢ ಕಪ್ಪು ಕೂದಲನ್ನು ಹೊಂದಬಹುದು. ನೀವು ಟ್ರೈ ಮಾಡಿ ನೋಡಿ .