ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಕುತೂಹಲ ಹಂತಕ್ಕೆ ತಲುಪುತ್ತಿದೆ. ಇದಾಗಲೇ ಗ್ರೂಪ್ ಎ ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ ತಲುಪಿವೆ. ಬಾಂಗ್ಲಾದೇಶ ಪಾಕಿಸ್ತಾನ ಅಧಿಕೃತವಾಗಿ ಟೂರ್ನಿಯಿಮದ ಹೊರಬಿದ್ದಿವೆ. ಸದ್ಯಕ್ಕೆ ಗ್ರೂಪ್ ಬಿ ಯಿಂದ ಸೆಮಿಫೈನಲ್ಗೆ ಯಾರು ಲಗ್ಗೆ ಇಡುವರು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಹೀಗಾಗಿ ಇಂದಿನ ಪಂದ್ಯ ಇಂಗ್ಲೆಂಡ್ ಹಾಗೂ ಆಫ್ಗಾನ್ ತಂಡಕ್ಕೆ ಮಾಡು ಇಲ್ಲ ಮಡಿ ಎಂಬಂತಾಗಿದೆ. ಗ್ರೂಪ್ ಬಿನಲ್ಲಿ ದಕ್ಷಿಣ ಆಫ್ರಿಕಾ , ಆಸ್ಟ್ರೇಲಿಯಾ ಆಡಿರುವ 2 ಪಂದ್ಯಗಳ ಪೈಕಿ ತಲಾ 3 ಅಂಕಗಳನ್ನು ಹೊಂದಿದೆ. ಈ ಎರಡು ತಂಡಗಳಿಗೆ ಇನ್ನೂ ಒಂದು ಪಂದ್ಯಗಳು ಬಾಕಿಯಿವೆ, ಆ ಪಂದ್ಯವನ್ನು ಗೆದ್ದರೆ ಒಟ್ಟು 5 ಅಂಕಗಳಾಗುತ್ತವೆ. ಮತ್ತೊಂದು ಕಡೆ ಇಂಗ್ಲೆಂಡ್ ಹಾಗೂ ಆಫ್ಗಾನ್ ತಮ್ಮ ಮೊದಲ ಪಂದ್ಯದಲ್ಲಿ ಸೋತಿವೆ. ಹೀಗಾಗಿ ಉಭಯ ತಂಡಗಳಿಗೂ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಈ ಪಂದ್ಯದಲ್ಲಿ ಗೆದ್ದ ತಂಡಗಳು ಮುಂದಿನ ಪಂದ್ಯವನ್ನು ಕೂಡ ಗೆದ್ದರೆ ಸೆಮಿಫೈನಲ್ ಹಂತಕ್ಕೆ ಹೋಗಬಹುದಾಗಿದೆ. ಆ ನಿಟ್ಟಿನಲ್ಲಿ ಇಂದಿನ ಪಂದ್ಯ ಸಾಕಷ್ಟು ಮಹತ್ವ ಪಡೆದುಕೊಂಡಿದೆ…

ಅಭಿಷೇಕ್.ಎಸ್